
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ನಿಂದ ವ್ಯಾಪಾರ ಮತ್ತು ಕೈಗಾರಿಕೆಗಳಿಗಾಗಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಸಮಾರಂಭ 2ನೇ ಉದ್ಯಮಬಾಗ್ ನ ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಅತಿಥಿಯಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆನಂದ ದೇಶಪಾಂಡೆ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ದಿಲೀಪ್ ದಾಮ್ಲೆ ಮೆಮೋರಿಯಲ್ ಟ್ರಸ್ಟ್ ಪ್ರಶಸ್ತಿ ಯನ್ನು ಸ್ನೇಹಮ್ ಇಂಟರ್‌ನ್ಯಾಶನಲ್ ನ ಸುನೀಷ್ ಮೆತ್ರಾಣಿ ಅವರಿಗೆ ನೀಡಲಾಯಿತು. ಬಸಪ್ಪ ಬಾಳಪ್ಪ ಕಗ್ಗಣಗಿ ಸ್ಮರಣಾರ್ಥ ನಿಧಿ ಪ್ರಶಸ್ತಿಯನ್ನು ದೀಪಕ ಗುರುನಾಥ ಗೋಜಗೇಕರ ಅವರಿಗೆ ನೀಡಲಾಯಿತು. ಪ್ಯಾಟ್ಸನ್ ಆಟೋಮೊಬೈಲ್ಸ್ ಪ್ರೈ. ಲಿ.ನ ರಾಹುಲ್ ಪಾಟೀಲ್ ಅವರಿಗೆ ಮಾಣಿಕ್ ಬಾಗ್ ಅಟೋಮೊಬೈಲ್ ಲಿಮಿಟೆಡ್ ನ ಪ್ರಶಸ್ತಿ, ಹೈಟೆಕ್ ಮೋಟಾರ್ಸ್ ಎಂಡ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ನ ವಿನಯಕುಮಾರ ಬಾಳಿಕಾಯಿ ಅವರಿಗೆ ಮಧುಕರ್ ವಿಠಲ್ ಹೆರ್ವಾಡ್ಕರ್ ಸ್ಮಾರಕ ಪ್ರಶಸ್ತಿ ನೀಡಲಾಯಿತು.
ನಿಕಟಪೂರ್ವ ಅಧ್ಯಕ್ಷ ಪಂಚಾಕ್ಷರಿ ಚೊಣ್ಣದ್ ಅವರ ಭಾವಚಿತ್ರವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅನಾವರಣಗೊಳಿಸಿದರು. ಬಿಸಿಸಿಐ ಅಧ್ಯಕ್ಷ ರೋಹನ್ ಜುವಾಳಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಭಾಕರ ನಾಗರಮುನೋಳಿ
ಕೊಳಗೇರಿ ನಿಗಮದಿಂದ ಶೀಘ್ರದಲ್ಲೇ ಮನೆಗಳ ನಿರ್ಮಾಣ : ಶಾಸಕ ಅನಿಲ ಬೆನಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ