
ಪ್ರಗತಿವಾಹಿನಿ ಸುದ್ದಿ; ಶೀಮ್ಲಾ: ಭೀಕರ ಬಸ್ ಅಪಘಾತದಲ್ಲಿ ಶಾಲಾ ಮಕ್ಕಳು ಸೇರಿ 16 ಜನರು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ.
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಕಣಿವೆಗೆ ಉರುಳಿಬಿದ್ದಿದೆ. ದಿರಂತದಲ್ಲಿ ಮಕ್ಕಳು ಸೇರಿ 16 ಜನರು ಮೃತಪಟ್ಟಿದ್ದಾರೆ ಎಂದು ಕುಲು ಡೆಪ್ಯೂಟಿ ಕಮಿಷ್ನರ್ ಅಶುತೋಷ್ ಗರ್ಗ್ ಮಾಹಿತಿ ನೀಡಿದ್ದಾರೆ.
ಸೈಂಜ್ ಗೆ ತೆರಳುತ್ತಿದ್ದ ಶಾಲಾ ಬಸ್ ಬೆಳಿಗ್ಗೆ 8:30ರ ಸುಮಾರಿಗೆ ಜಂಗ್ಲಾ ಗ್ರಾಮದ ಬಳಿ ಕಣಿವೆಗೆ ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಭಾರಿ ಮಳೆಗೆ ಮುಳುಗಿದ ಸೇತುವೆ; ಇನ್ನೂ ಮೂರು ದಿನ ಹೆಚ್ಚಲಿದೆ ಮಳೆ ಅಬ್ಬರ