ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕನ್ನಡ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಇಂದು ತಗ್ಗಿದೆಯಾದರೂ ಹಲವೆಡೆ ಜಿಟಿಜಿಟಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರದಿಂದಾಗಿ ಗೃಹ ಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೇ ಮುರಿದು ಬಿದ್ದ ಘಟನೆ ನಡೆದಿದೆ.
ಜುಲೈ 18ರಂದು ಹೊಸ ಮನೆಯ ಗೃಹ ಪ್ರವೇಶಕ್ಕೆಂದು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮನೆ ಶೇ.90ರಷ್ಟು ಭಾಗ ಪೂರ್ಣಗೊಂಡಿತ್ತು. ಆದರೆ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಗೆ ಮನೆಯ ಪಕ್ಕದಲ್ಲಿದ್ದ ಬೃಹತ್ ಗುಡ್ಡ ಮನೆಯಮೇಲೆ ಕುಸಿದು ಬಿದ್ದಿದೆ. ಪರಿಣಾಮ ಮನೆಯ ಬಹುತೇಕ ಭಾಗಗಳು ಸಂಪೂರ್ಣ ಹಾನಿಯಾಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ಈ ಘಟನೆ ನದೆದಿದ್ದು, ತೇಜ್ ಕುಮಾರ್ ಹಾಗೂ ತಾರಾನಾಥ್ ದಂಪತಿಗೆ ಸೇರಿದ ಮನೆ ಇದಾಗಿದೆ. ಮನೆಯಲ್ಲಿ ಪ್ರಜ್ವಲ್ ಹಾಗೂ ಉಜ್ವಲ್ ಎಂಬ ಸಹೋದರರು ವಾಸವಾಗಿದ್ದರು, ಗೃಹಪ್ರವೇಶಕ್ಕಾಗಿ ಸಿದ್ಧತೆ ನಡೆಸಿದ್ದರು. ಮುಂಜಾನೆ 6:30ರ ಸುಮಾರಿಗೆ ಮನೆಯ ಮೇಲೆ ಗುಡ್ಡ ಕುಸಿದಿದೆ. ಮರಗಳು ಧರಾಶಾಹಿಯಾಗಿವೆ. ಪರಿಣಾಮ ಮನೆ ಬಹುತೇಕ ನೆಲಕಚ್ಚಿದೆ. ಇರುವ ಮನೆ ಗೋಡೆಯ ಭಾಗದಲ್ಲಿ ಬಿರುಕು ಬಿಟ್ಟಿದೆ.
ಗುಡ್ಡ ಕುಸಿತದಿಂದಾಗಿ ಮನೆ ಮುಂದೆ ನಿಲ್ಲಿಸಿದ್ದ ಮೂರು ಬೈಕ್ ಗಳು ಜಖಂಗೊಂಡಿದೆ.
ಸಿಎಂ ಭಟ್ಕಳ ಪ್ರವಾಸ ರದ್ದು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ