Latest

ಸುಶಾಂತ್ ಸಿಂಗ್ ಗಾಗಿ ಹಲವರಿಂದ ಡ್ರಗ್ಸ್ ಸಂಗ್ರಹಿಸಿದ್ದ ನಟಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಬುಧವಾರ ಎನ್ ಡಿಪಿಎಸ್ ಕೋರ್ಟ್ ನಲ್ಲಿ ಕರಡು ಚಾರ್ಜ್ ಶೀಟ್ ಸಲ್ಲಿಸಿದ್ದು  ಗೆಳತಿ, ನಟಿ ರಿಯಾ ಚಕ್ರವರ್ತಿ ಸುಶಾಂತ್ ಗಾಗಿ ಡ್ರಗ್ಸ್ ಸಂಗ್ರಹಿಸಿದ್ದರು ಎಂದು ತಿಳಿಸಿದೆ. 

ಸ್ಯಾಮ್ಯುಯೆಲ್ ಮಿರಾಂಡಾ, ಶೌವಿಕ್ ಚಕ್ರವರ್ತಿ, ದೀಪೇಶ ಸಾವಂತ ಮತ್ತಿತರರಿಂದ ನಟಿ ರಿಯಾ ಡ್ರಗ್ಸ್ ಪಡೆದು  ಸುಶಾಂತ ಸಿಂಗ್ ರಜಪೂತ ಅವರಿಗೆ ನೀಡಿದ್ದರು. ಸುಶಾಂತ್ ಸಿಂಗ್ ಅವರಿಗೆ ಡ್ರಗ್ಸ್ ಪೂರೈಸುವ ಕಾರ್ಯ 2018 ರಿಂದಲೂ ಜಾರಿಯಿತ್ತು ಎಂದು ಕರಡು ಜಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.

Home add -Advt

2020ರಲ್ಲಿ ನಟ ಸುಶಾಂತ್ ಸಿಂಗ್ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು.  ಅವರ ಸಾವಿಗೆ ಸಂಬಂಧಿಸಿದಂತೆ 35 ಜನರ ವಿರುದ್ಧ ಎನ್ ಸಿಬಿ ಕರಡು ಆರೋಪ  ಪಟ್ಟಿ ಸಲ್ಲಿಸಿದೆ.

ಗೃಹಪ್ರವೇಶಕ್ಕೆ ರೆಡಿಯಾಗಿದ್ದ ಮನೆ ಮೇಲೆ ಗುಡ್ಡ ಕುಸಿತ; ಮಳೆ ಅವಾಂತರಕ್ಕೆ ಕಂಗಾಲಾದ ಜನರು

Related Articles

Back to top button