Kannada NewsKarnataka News

ಬೆಳಗಾವಿ ಮಹಾನಗರದ ಜನರಿಗೆ 2 ಮಹತ್ವದ ಸೂಚನೆಗಳು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರದ ಜನರಿಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕೆಯುಐಡಿಎಫ್ ಸಿ ಮಹತ್ವದ ಪ್ರಕಟಣೆಗಳನ್ನು ನೀಡಿವೆ.

  1. ಹಿಂಡಲಗಾ ಪಂಪ್ ಹೌಸ್ ಮುಳುಗಡೆಯಾಗುವ ಸಂಭವ ಇರುವುದರಿಂದ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುವ ಕುರಿತು.

ಬೆಳಗಾವಿ ನಗರದ ಸುತ್ತ ಮುತ್ತಲೂ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಕಳೆದ ಒಂದು ವಾರದಿಂದ ವಿಪರೀಪ ಮಳೆಯಾಗುತ್ತಿದ್ದು, ರಕ್ಕಸಕೊಪ್ಪ ಜಲಾಶಯದ ಮಟ್ಟವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾವುದೇ ಸಮಯದಲ್ಲಿ ಸದರಿ ಜಲಾಶಯದ ಎಲ್ಲಾ ಗೇಟ್‌ಗಳನ್ನು ತೆರೆಯುವ ಸಾಧ್ಯತೆ ಇರುತ್ತದೆ. ಸದರ ಜಲಾಶಯದ ನೀರು ಮಾರ್ಖಂಡೇಯ ನದಿಯ ಮುಖಾಂತರ ಹಿಂಡಲಗಾ ಪಂಪ್ ಹೌಸ್ ತಲುಪುವುದರಿಂದ,  ಪಂಪ್ ಹೌಸ್ ಮುಳುಗಡೆಯಾಗುವ ಸಂಭವವಿರುವುದರಿಂದ,   ಪಂಪ್ ಹೌಸ್‌ನಲ್ಲಿಯ ಪಂಪ್‌ಗಳ ವಿದ್ಯುತ್ ಸರಬರಾಜುವನ್ನು ಸಂಪೂರ್ಣ ಬಂದ್ ಇಡಲಾಗುವುದು. ಜಲಾಶಯದ ನೀರು ನದಿಯ ಮುಖಾಂತರ ಪಂಪ್‌ಹೌಸ್‌ಗಳಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗುವವರೆಗೂ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಲಿದ್ದು, ಇಂತಹ ಅನಿವಾರ್ಯ ಸಮಯದಲ್ಲಿ ಸಾರ್ವಜನಿಕರು  ಸಹಕರಿಸಲು  ಮಹಾನಗರ ಪಾಲಿಕೆ ಮತ್ತು ಕೆ.ಯು.ಐ.ಡಿ.ಎಫ್.ಸಿ ಪರವಾಗಿ ಈ ಮೂಲಕ ವಿನಂತಿಸಲಾಗಿದೆ.

2. ರಕ್ಕಸಕೊಪ್ಪ ಭರ್ತಿ, ಎಚ್ಚರಿಕೆ

ರಕ್ಕಸಕೊಪ್ಪ ಜಲಾಶಯದ ನೀರಿನ ಗಲಷ್ಠ ಮಟ್ಟ 2475′ ಫೂಟ್ ಇದ್ದು, ದಿನಾಂಕ : 14.07.2022 ರಂದು 2470′ ಫೂಟ್ ನೀರು ಸಂಗ್ರಹವಾಗಿದೆ.

ರಕ್ಕಸಕೊಪ್ಪ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿದ್ದು, ಯಾವುದೇ ಸಮಯದಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ. ಆದಕಾರಣ ನದಿಗೆ ಜಲಾಶಯದ ನೀರನ್ನು ಯಾವುದೇ ಕ್ಷಣದಲ್ಲಿ ಹೊರ ಬಿಡಲಾಗುವುದು.

ಆದ್ದರಿಂದ ನದಿಯಲ್ಲಿ ಪ್ರವಾಹವು ಹೆಚ್ಚಾಗುವ ಸಾಧ್ಯತೆ ಇದ್ದ ಕಾರಣ ರಕ್ಕಸಕೊಪ್ಪ ಜಲಾಶಯದ ಕಳಪ್ರದೇಶದ ಮಾರ್ಕಂಡೆಯ ನದಿಯ ದಡದಲ್ಲಿರುವ ಜನರು ಎಚ್ಚರಿಕೆಯಿಂದ ಇರಲು ಕೋರಲಾಗಿದೆ.

ದೇಶದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ; ರಾಜ್ಯಗಳಿಗೆ ಆರೋಗ್ಯ ಇಲಾಖೆ ಕಟ್ಟೆಚ್ಚರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button