ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತ ಸರಕಾರದ ಶಿಕ್ಷಣ ಸಚಿವಾಲಯ ದೇಶದ 2022ರ ಟಾಪ್ 10 ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.
ಇದರಲ್ಲಿ ಬೆಂಗಳೂರಿನ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸೈನ್ಸ್ ನಂ.1 ಸ್ಥಾನ ಪಡೆದಿದೆ. ದೆಹಲಿಯ ಜೆಎನ್ ಯುಗೆ ಎರಡನೇ ಸ್ಥಾನ ಲಭಿಸಿದ್ದರೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ 3ನೇ ಸ್ಥಾನದಲ್ಲಿದೆ.
ಕೋಲ್ಕೊತ್ತಾದ ಜಾದವಪುರ ಯುನಿವರ್ಸಿಟಿ ಕೋಯಂಬತ್ತೂರಿನ ಅಮೃತ ವಿಶ್ವವಿದ್ಯಾಪೀಠಂ, ವಾರಣಾಸಿಯ ಬನಾರಸ್ ಹಿಂದೂ ಯುನಿವರ್ಸಿಟಿ ಮಣಿಪಾಲದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಕೋಲ್ಕೊತ್ತಾದ ಕೋಲ್ಕೊತ್ತಾ ಯುನಿವರ್ಸಿಟಿ, ವೆಲ್ಲೋರ್ ನ ವೆಲ್ಲೋರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಗೂ ಹೈದರಾಬಾದ್ ನ ಹೈದರಾಬಾದ್ ಯುನಿವರ್ಸಿಟಿಗಳು ಕ್ರಮವಾಗಿ 4ರಿಂದ 10ರವರೆಗಿನ ಸ್ಥಾನ ಪಡೆದಿವೆ.
ADGP ಅಮೃತ್ ಪೌಲ್ ನ್ಯಾಯಾಂಗ ಬಂಧನಕ್ಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ