Latest

ಇಂಡಿಗೋ ವಿಮಾನ ತುರ್ತು ಭೂ ಸ್ಪರ್ಶ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಶಾರ್ಜಾದಿಂದ ಹೈದರಾಬಾದ್ ಗೆ ತೆರಳಬೇಕಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಷ ಮಾಡಿದ ಘಟನೆ ನಡೆದಿದೆ.

ಇಂಡಿಗೋ ವಿಮಾನ 6E-1406 ವಿಮಾನ ಶಾರ್ಜಾದಿಂದ ಹೈದರಾಬಾದ್ ಗೆ ಬರಬೇಕಿತ್ತು. ಆದರೆ ವಿಮಾನದಲ್ಲಿ ತಾಂತ್ರಿಕ ವೈಫಲ್ಯ ಕಂಡುಬಂದಿದೆ. ವಿಮಾನದ ಎರಡನೇ ಎಂಜಿನ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಕಂಡುಬಂದಿದೆ. ತಕ್ಷಣ ಪೈಲಟ್ ವಿಮಾನವನ್ನು ಕರಾಚಿ ಕೊಂಡೊಯ್ದು, ತುರ್ತು ಭೂಸ್ಪರ್ಶ ಮಾಡಲಾಯಿತು.

Home add -Advt

ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದು, ಪ್ರಯಾಣಿಕರನ್ನು ಕರೆತರಲು ಹೈದರಾಬಾದ್ ನಿಂದ ಕರಾಚಿಗೆ ಇನ್ನೊಂದು ವಿಮಾನ ತೆರಳಿದೆ.

ಇಲಿ ಪಾಷಾಣ ಸೇವಿಸಿ ಮಹಿಳೆ ಆತ್ಮಹತ್ಯೆ

Related Articles

Back to top button