ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಾಲು, ಮೊಸರಿನ ಮೇಲೆ ಕೇಂದ್ರ ಸರ್ಕಾರ ಜಿಎಸ್ ಟಿ ವಿಧಿಸಿದ್ದು, ಜನಸಾಮಾನ್ಯರಿಗೆ ಭಾರಿ ಹೊರೆಯಾಗುತ್ತಿದೆ ಎಂಬ ಅಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಹಾಲು, ಮೊಸರು ನಾರ್ಮಲ್ ಆಗಿ ಸೇಲ್ ಮಾಡಿದವರಿಗೆ ಜಿಎಸ್ ಟಿ ಹಾಕಿಲ್ಲ. ಪ್ಯಾಕೇಟ್ ಮಾಡಿ ಸೇಲ್ ಮಾಡುತ್ತಿರುವವರಿಗೆ ಜಿಎಸ್ ಟಿ ಹಾಕಿದ್ದೇವೆ. ಬ್ರ್ಯಾಂಡೆಡ್ ಇರುವುದರಿಂದ ಅವರಿಗೆ ಮಾತ್ರ 5% ಜಿಎಸ್ ಟಿ ವಿಧಿಸಲಾಗಿದೆ ಎಂದರು.
ಆಕ್ಷೇಪ ವ್ಯಕ್ತಪಡಿಸಲು ಅವಕಾಶವಿದೆ. ಟ್ಯಾಕ್ಸ್ ಗ್ರಾಹಕರಿಗೆ ಬೀಳುತ್ತಿತ್ತು. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮರುಪಾವತಿ ಮಾಡುವ ಅವಕಾಶವಿದೆ. ಗ್ರಾಹಕರಿಗೆ ಪಾಸ್ ಅನ್ ಮಾಡಬೇಕು 5% ಟ್ಯಾಕ್ಸ್ ಮರುಪಾವತಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎದರು.
ಕೆ ಎಂ ಎಫ್ ಹಾಲು ಹೊರತಿಪಡಿಸಿ ಇತರ ಉತ್ಪನ್ನಗಳ ದರ ಹೆಚ್ಚಳ ಮಾಡಲಾಗಿದೆ ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಕೆ ಎಂ ಎಫ್ ಗೆ ಸೂಚನೆ ನಿಡಲಾಗುವುದು ಎಂದು ಹೇಳಿದರು.
ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು ಖಚಿತ; ಸಿಎಂ ಬೊಮ್ಮಾಯಿ ವಿಶ್ವಾಸ
ನರ್ಮದಾ ನದಿಗೆ ಉರುಳಿ ಬಿದ್ದ ಬಸ್; 13 ಪ್ರಯಾಣಿಕರ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ