Latest

ಒಳ ಉಡುಪು ತೆಗೆದು ನೀಟ್ ಪರೀಕ್ಷೆ ಬರೆಯುಂತೆ ಹೇಳಿದ ಮೇಲ್ವಿಚಾರಕ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ನೀಟ್ ಪರೀಕ್ಷೆಯ ಸಂದರ್ಬದಲ್ಲಿ ಕೇರಳದ ಪರೀಕ್ಷಾ ಕೇಂದ್ರದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪರೀಕ್ಷೆ ಬರೆಯಲು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಒಳ ಉಡುಪುಗಳನ್ನು ತೆಗೆದಿಟ್ಟು ಪರೀಕ್ಷೆ ಬರೆಯುವಂತೆ ಪರೀಕ್ಷಾ ಮೇಲ್ವಿಚಾರಕರು ಸೂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಚಡಮಂಗಳದ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿ ಯುವತಿಯೊಬ್ಬಳು ಪರೀಕ್ಷಾ ಸಿಬ್ಬಂದಿಗಳ ವಿರುದ್ಧ ಇಂತಹ ಗಂಭೀರ ಆರೋಪ ಮಾಡಿದ್ದು, ಒಳ ಉಡುಪುಗಳನ್ನು ತೆಗೆ ಪರೀಕ್ಷೆಗೆ ಹಾಜರಾಗುವಂತೆ ಪರೀಕ್ಷಾ ಮೇಲ್ವಿಚಾರಕರು ಹೇಳಿದ್ದಾಗಿ ದೂರಿದ್ದಾಳೆ.

Home add -Advt

ಪರೀಕ್ಷಾ ಸಿಬ್ಬಂದಿಗಳ ನಡೆಗೆ ಯುವತಿ ಆಘಾತಕ್ಕೊಳಗಾಗಿದ್ದಾಳೆ. ಈ ಬಗ್ಗೆ ತನ್ನ ಪೋಷಕರಿಗೆ ಯುವತಿ ಮಾಹಿತಿ ನೀಡಿದ್ದು, ಇದೀಗ ಪರೀಕ್ಷಾರ್ಥಿಯ ಪೋಷಕರು ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಕೊಟ್ಟರಕ್ಕಾರ ಡಿವೈಎಸ್ ಪಿ ಮಾಹಿತಿ ನೀಡಿದ್ದಾರೆ.

ಸ್ನೇಹಿತೆಯ ತುಟಿಗೆ ಮುತ್ತಿಟ್ಟು ಹುಕ್ಕಾ ಹೊಗೆ ಬಿಟ್ಟ ಸ್ಯಾಂಡಲ್ ವುಡ್ ನಟಿ

Related Articles

Back to top button