ರಾಷ್ಟ್ರಪತಿ ಚುನಾವಣೆ: ಎನ್ ಡಿಎ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾಗಿ ಹೇಳಿಕೊಂಡ ಕಾಂಗ್ರೆಸ್ ಶಾಸಕ

ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಕಾಂಗ್ರೆಸ್ ಶಾಸಕರೊಬ್ಬರು ಸೋಮವಾರ ನಡೆದ  ರಾಷ್ಟ್ರಪತಿ ಚುನಾವಣೆಯಲ್ಲಿ ತಾವು ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಮತ ನೀಡಿದ್ದಾಗಿ ಬಹಿರಂಗ ಹೇಳಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ಮುಜುಗರ ಉಂಟುಮಾಡಿದ್ದಾರೆ.

ಕಟಕ್-ಬಾರಾಬಾತಿ ವಿಧಾನಸಭೆ ಕ್ಷೇತ್ರದ ಶಾಸಕ ಮೊಹಮ್ಮದ್ ಮೋಕಿಂ ಎನ್ ಡಿಎ ಅಭ್ಯರ್ಥಿ ಪರ ಮತ ಚಲಾಯಿಸಿದವರು. ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಅವರು “ಇದು ನನ್ನ ವೈಯಕ್ತಿಕ ನಿರ್ಧಾರ. ನಾನು ನನ್ನ ಆತ್ಮಸಾಕ್ಷಿಗೆ ಒಪ್ಪಿ ನಮ್ಮ ಮಣ್ಣಿನ ಮಗಳಿಗೆ ಮತ ನೀಡಿದ್ದೇನೆ. ನನ್ನ ಮಣ್ಣಿಗಾಗಿ ಏನಾದರೂ ಮಾಡುವಂತೆ ನನ್ನ ಹೃದಯ ಹೇಳಿದೆ” ಎಂದು ಹೇಳಿಕೊಂಡಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಪಕ್ಷದಿಂದ ವ್ಹಿಪ್ ಜಾರಿಮಾಡಿಲ್ಲ. ಅಷ್ಟೇ ಅಲ್ಲ, ದೇಶದ ಆಂತರಿಕ ಮತ್ತು ಬಾಹ್ಯ ವಲಯಗಳಿಂದ ಮುರ್ಮು ಅವರಿಗೆ ಮತ ನೀಡುವಂತೆ ನನಗೆ ಸಲಹೆಗಳು ಬಂದಿದ್ದವು. ಈ ವಿಷಯದಲ್ಲಿ ಓಡಿಶಾ ಜನತೆ ನನ್ನನ್ನು ಬೆಂಬಲಿಸುವುದಾಗಿ ನಂಬಿದ್ದೇನೆ.” ಎಂದು ಸಹ ಅವರು ಹೇಳಿಕೊಂಡಿದ್ದಾರೆ.

ಈ ಮಧ್ಯೆ ಓಡಿಶಾ ಪ್ರದೇಶ ಕಾಂಗ್ರೆಸ್ ಕಮಿಟಿ (OPCC) ಅಧ್ಯಕ್ಷ ಶರತ್ ಪಾಟ್ನಾಯಿಕ್ ಹಾಗೂ ಕಾಂಗ್ರೆಸ್ ಲೆಜಿಸ್ಲೇಚರ್ ಪಾರ್ಟಿ (CLP) ನರಸಿಂಹ ಮಿಶ್ರಾ ಅವರು ಪ್ರತಿಕ್ರಿಯಿಸಿ ಮೊಹಮ್ಮದ್ ಮೋಕಿಂ ಅವರ ಈ ನಿರ್ಧಾರದ ಬಗ್ಗೆ ಹೈಕಮಾಂಡ್ ಗಮನ ಸೆಳೆದಿದ್ದು ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಒಳ ಉಡುಪು ತೆಗೆದು ನೀಟ್ ಪರೀಕ್ಷೆ ಬರೆಯುಂತೆ ಹೇಳಿದ ಮೇಲ್ವಿಚಾರಕ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button