Latest

ಬೈಕ್‌ಗೆ ಟಿಪ್ಪರ್ ಡಿಕ್ಕಿ: ಇಬ್ಬರು ಯುವಕರ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:

ಬೆಳಗಾವಿ -ಪಣಜಿ ರಾಜ್ಯ ಹೆದ್ದಾರಿಯಲ್ಲಿ ಗೋವಾದಿಂದ ಖಾನಾಪುರದತ್ತ ಬರುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರೂ ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಗೋವಾ ರಾಜ್ಯದ ಟಿಸ್ಕ್ ಉಸಗಾಂವ ಬಳಿ ಮಂಗಳವಾರ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ತಾಲೂಕಿನ ನಿಟ್ಟೂರು ಗ್ರಾಮದ ನಿವಾಸಿ ಭೀಮಣ್ಣ ಗಣೇಬೈಲಕರ (೨೧) ಮತ್ತು ಸಂಗರಗಾಳಿ ನಿವಾಸಿ ರಾಹುಲ ಮನ್ನೋಳಕರ (೨೨) ಎಂದು ಗುರುತಿಸಲಾಗಿದೆ.

Home add -Advt

ಭೀಮಣ್ಣ ಮತ್ತು ರಾಹುಲ ಇಟ್ಟಿಗೆ ಮಾರಾಟದ ಉದ್ಯೋಗ ಮಾಡುತ್ತಿದ್ದು, ಮಂಗಳವಾರ ಇಟ್ಟಿಗೆ ಖರೀದಿಸಿದವರಿಂದ ಹಣ ಪಡೆಯಲು ನಿಟ್ಟೂರು ಗ್ರಾಮದಿಂದ ಗೋವಾದ ಫೋಂಡಾ ನಗರಕ್ಕೆ ಬೈಕ್ ಮೇಲೆ ತೆರಳಿದ್ದರು. ಹಣ ಪಡೆದು ಊರಿನತ್ತ ಮರಳುವಾಗ ಈ ಘಟನೆ ನಡೆದಿದ್ದು, ಗೋವಾದ ಬಾಂದೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ಗೋವಾದಲ್ಲಿ ಮೃತರ ಮರಣೋತ್ತರ ಪರೀಕ್ಷೆ ಬಳಿಕ ಇಬ್ಬರ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದು, ಮೃತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿದೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಮೃತರ ಸಂಬಂಧಿಗಳ ರೋದನ ಮುಗಿಲು ಮುಟ್ಟಿತ್ತು.

Related Articles

Back to top button