ಪ್ರಗತಿವಾಹಿನಿ ಸುದ್ದಿ, ಗೋಕಾಕ: ಬೈಕ್ ಕಳುವು ಮಾಡಿ ಸಾಗುತ್ತಿದ್ದ ಆರೋಪಿಯೊಬ್ಬ ಸೀದಾ ಹೋಗಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.
ಮಾಲದಿನ್ನಿ ಕ್ರಾಸ್ ಬಳಿ ಗೋಕಾಕ ಗ್ರಾಮೀಣ ಠಾಣೆ ಎಎಸ್ಐ ಟಿ.ಎಸ್.ದಳವಾಯಿ ಅವರು ರೈತ ಪ್ರತಿಭಟನೆಗೆ ಹೋಗುತ್ತಿದ್ದವರ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಯರಗಟ್ಟಿ ಕಡೆ ಸಾಗುತ್ತಿದ್ದ ನಂಬರ್ ಪ್ಲೇಟ್ ಇಲ್ಲದ ಬೈಕ್ ನಿಲ್ಲಿಸಿ ದಾಖಲೆಗಳನ್ನು ಕೇಳಿದಾಗ ಆತನ ಬಳಿ ಯಾವುದೇ ದಾಖಲೆಗಳಿರಲಿಲ್ಲ.
ಈ ವೇಳೆ ಬೈಕ್ ವಶಕ್ಕೆ ಪಡೆದು ವಿಚಾರಣೆ ಮಾಡಿ 1.10ಲಕ್ಷ ರೂ. ಮೌಲ್ಯದ ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಗೋಕಾಕ ಡಿಎಸ್ ಪಿ ಮನೋಜಕುಮಾರ್ ನಾಯ್ಕ, ಸಿಪಿಐ ಗೋಪಾಲ ರಾಠೋಡ ಮಾರ್ಗದರ್ಶನದಲ್ಲಿ ಗೋಕಾಕ ಗ್ರಾಮೀಣ ಪಿಎಸ್ ಐ ಎನ್.ಆರ್.ಖಿಲಾರೆ, ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಎಸ್ ಐಗಳಾದ ಟಿ.ಎಸ್. ದಳವಾಯಿ, ಎಸ್.ಕೆ. ಪಾಟೀಲ, ಎಂ.ವೈ. ಪಡದಲ್ಲಿ, ಡಿ.ಜಿ. ಕೊಣ್ಣೂರ, ಎಸ್.ಬಿ. ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇಬ್ಬರ ಮಧ್ಯೆ ನಾನೇಕೆ ಬರಲಿ, ನನಗೆ ನೇರವಾಗಿ ಬರುವ ಸಾಮರ್ಥ್ಯ ಇದೆ – ಎಂ.ಬಿ.ಪಾಟೀಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ