Latest

ಯೂಟ್ಯೂಬರ್ ಭೇಟಿಗಾಗಿ 250 ಕಿಮೀ ಸೈಕಲ್ ತುಳಿದ ಬಾಲಕ; ಮನೆಯಿಂದ ನಾಪತ್ತೆಯಾಗಿದ್ದವ ಮತ್ತೆ ಪತ್ತೆ

ಪ್ರಗತಿವಾಹಿನಿ ಸುದ್ದಿ, ಪಟಿಯಾಲಾ: ಯೂಟ್ಯೂಬರ್ ಭೇಟಿ ಮಾಡಲು 13 ವರ್ಷದ ಬಾಲಕನೊಬ್ಬ 250 ಕಿ.ಮೀ. ಸೈಕಲ್ ತುಳಿದಿದ್ದಾನೆ.

ಪಂಜಾಬ್ ನ ಪಟಿಯಾಲಾದ ವೀರೇಶ್ ಭೂಷಣ್ ಎಂಬಾತ ಈ ಸಾಹಸಕ್ಕಿಳಿದ ಬಾಲಕ. ಯೂಟ್ಯೂಬರ್ ನಿಶ್ಚಯ್ ಮಲ್ಹಾನ್ (ಟ್ರಿಗರ್ಡ್ ಇನ್ಸಾನ್) ಅವರ ಅಭಿಮಾನಿಯಾಗಿದ್ದ ಬಾಲಕ ಅ.4ರಂದು ಪಟಿಯಾಲಾದಿಂದ ನವದೆಹಲಿಯ ಪಿತಂಪುರಕ್ಕೆ 250 ಕಿ.ಮೀ. ಸೈಕಲ್ ನಲ್ಲಿ ಹೊರಟಿದ್ದಾನೆ.

Home add -Advt

ಇತ್ತ ಕುಟುಂಬದವರು ಈತನನ್ನು ಹುಡುಕಿ ಹೈರಾಣಾಗಿ ಕೊನೆಗೆ ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಟಿಯಾಲಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡು ಈ ಬಗ್ಗೆ ಯಾವುದೇ ಮಾಹಿತಿಯಿದ್ದರೆ ಸೈಬರ್ ಕ್ರೈಮ್ ಸೆಲ್‌ಗೆ ತಿಳಿಸುವಂತೆ ಜನರನ್ನು ವಿನಂತಿಸಿದ್ದರು.

ಆದರೆ ನಿಶ್ಚಯ್ ಮಲ್ಹಾನ್ ದುಬೈನಲ್ಲಿರುವುದು ಬಾಲಕನಿಗೆ ತಿಳಿದಿರಲಿಲ್ಲ. ಇದೀಗ ಬಾಲಕನನ್ನು ಪತ್ತೆಹಚ್ಚಿ ಮನೆಗೆ ಕರೆತರಲಾಗಿದೆ. ಈ ವಿಷಯವನ್ನು ನಿಶ್ಚಯ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದು ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ.

ಗುಡುಗು, ಸಿಡಿಲು ಸಹಿತ ಭಾರಿ ಮಳೆ ಎಚ್ಚರಿಕೆ

Related Articles

Back to top button