Latest

ಅಕ್ರಮವಾಗಿ ಬಂದೂಕು ಇಟ್ಟುಕೊಂಡಿದ್ದ ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಶಿರಸಿ: ಒಂಟಿ ನಳಿಕೆ ಬಂದೂಕನ್ನು ಪರವಾನಗೆ ಇಲ್ಲದೇ ಅಕ್ರಮವಾಗಿ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬನವಾಸಿ ರಸ್ತೆ ಕರೆಕೊಪ್ಪ ಗ್ರಾಮದ ಗಡಿಹಳ್ಳಿ ಕ್ರಾಸ್ ಹತ್ತಿರ ಅಕ್ರಮವಾಗಿ ಬೇಟೆ ಆಡುವ ಉದ್ದೇಶಕ್ಕಾಗಿ ಯಾವುದೇ ಅಧೀಕೃತ ಪರವಾನಿಗೆ ಇಲ್ಲದೇ ಒಂಟಿ ನಳಿಕೆಯ ಬಂದೂಕನ್ನು ವಶದಲ್ಲಿಟ್ಟುಕೊಂಡಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಭಾಷು ಖಾದರ ಖಾನ್, ಅಬ್ದುಲ್ ರಝಾಕ್ ಭಾಷು ಖಾನ್ನನ್ನು ಬಂಧಿಸಿದ್ದಾರೆ.

ಭಾರತೀಯ ಆಯುಧ ಕಾಯ್ದೆ-1959 ಯಂತೆ ಪ್ರಕರಣ ದಾಖಲಿಸಿ ಆರೋಪಿಗಳಿಂದ ಒಂದು ಒಂಟಿನಳಿಕೆಯ ಬಂದೂಕು ಮತ್ತು ಗುಂಡುಗಳನ್ನು
ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಭದರಿನಾಥ್‍ರವರ ನಿರ್ದೇಶನದಂತೆ ,ಪೊಲೀಸ್ ಉಪಾಧೀಕ್ಷಕರಾದ ರವಿ ಡಿ ನಾಯ್ಕ, ಶಿರಸಿ ವೃತ್ತ ನಿರೀಕ್ಷಕರಾದ ಪ್ರದೀಪ ಬಿ.ಯು ರವರ ನೇತೃತ್ವದಲ್ಲಿ, ಶಿರಸಿ ಗ್ರಾಮೀಣ ಪೊಲೀಸ ಠಾಣೆಯ ನಂಜಾನಾಯ್ಕ್.ಎನ್ ಪಿ.ಎಸ್.ಐ (ಕಾ&ಸು), ಪ್ರೋ,ಪಿ,ಎಸ್,ಐ ಕೃಷ್ಣೆಗೌಡ,ಎನ್,ಅರಕೇರಿ ಮತ್ತು ಸಿಬ್ಬಂದಿಗಳಾದ ಪ್ರಶಾಂತ ಪಾವಸ್ಕರ, ಚಂದ್ರಪ್ಪ ಕೊರವರ, ಸತೀಶ ನಾಯ್ಕ , ಜಿಮ್ಮು ಘಾಟು ಸಿಂದೆ, ಶ್ರೀಧರ ನಾಯ್ಕ ಮತ್ತು ಮಂಜುಳಾ ಹಾಲಗಿ ರವರನ್ನೊಳಗೊಂಡ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

Home add -Advt

Related Articles

Back to top button