
ಪ್ರಗತಿವಾಹಿನಿ ಸುದ್ದಿ, ಅಥೆನ್ಸ್: ಗ್ರೀಸ್ ನಲ್ಲಿ ದೋಣಿಯೊಂದು ಮುಳುಗಡೆಯಾಗಿ ಕನಿಷ್ಠ 78 ವಲಸಿಗರು ಮೃತಪಟ್ಟಿದ್ದು ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.
ಘಟನೆಯಲ್ಲಿ 104ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. ಯುರೋಪ್ ತಲುಪಲು ಪ್ರಯತ್ನಿಸುತ್ತಿದ್ದಾಗ ಕಿಕ್ಕಿರಿದು ತುಂಬಿದ್ದ ಮೀನುಗಾರಿಕಾ ದೋಣಿ ಮಗುಚಿ ಬಿತ್ತು. ನಿಧಾನವಾಗಿ ಮುಳುಗಡೆಯಾದ ನಂತರ ರಕ್ಷಣಾ ಹಡಗುಗಳ ಮೂಲಕ ಸ್ಥಳಕ್ಕೆ ಧಾವಿಸಿ ಕಾಣೆಯಾದವರಿಗಾಗಿ ಶೋಧ ಕೈಗೊಳ್ಳಲಾಗುತ್ತಿದೆ.
ಈ ದುರಂತದಲ್ಲಿ ಕನಿಷ್ಠ 79 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಲಿಬಿಯಾದಿಂದ ಇಟಲಿಗೆ ಪ್ರಯಾಣಿಸುವಾಗ ಗ್ರೀಸ್ ಕರಾವಳಿಯಲ್ಲಿ ಆಳವಾದ ನೀರಿನಲ್ಲಿ ಈ ದುರಂತ ಸಂಭವಿಸಿತು.
ಇದು ಮೆಡಿಟರೇನಿಯನ್ ಸಮುದ್ರದಲ್ಲಿ ನಡೆದ ಅತ್ಯಂತ ಘೋರ ದುರಂತಗಳಲ್ಲಿ ಒಂದಾಗಿದ್ದು ಮುಳುಗಡೆಯಾದ ಬೋಟ್ ನಲ್ಲಿ ಇನ್ನಷ್ಟು ಮಹಿಳೆಯರು, ಮಕ್ಕಳು ಸಿಲುಕಿಕೊಂಡಿರುವ ಸಂದೇಹವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ