Kannada NewsKarnataka News

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೋಯಿಂಗ್ ವಿಮಾನ; ಸಂಭ್ರಮಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಇದೇ ಮೊದಲ ಬಾರಿಗೆ  ಬೋಯಿಂಗ್  ವಿಮಾನ ಗುರುವಾರ ಬಂದಿಳಿದಿದೆ.

೧೮೯ ಆಸನ ಸಾಮರ್ಥ್ಯದ ಸ್ಪೈಸ್ ಜೆಟ್‌ನ ಬೋಯಿಂಗ್ ೭೩೭ ಮ್ಯಾಕ್ಸ್ ೮ ವಿಮಾನ ಬೆಳಗಾವಿ -ದೆಹಲಿ ನಡುವೆ ವಾರಕ್ಕೆ 4 ದಿನ ಹಾರಾಟ ನಡೆಸಲಿದೆ.

ಗುರುವಾರ ಮೊದಲ ಬಾರಿಗೆ ಆಗಮಿಸಿದ ಬೋಯಿಂಗ್ ೭೩೭ ಮ್ಯಾಕ್ಸ್ ೮ ವಿಮಾನದಲ್ಲಿ ೨೭ ಪ್ರಯಾಣಿಕರು ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರೆ ೭೭ ಪ್ರಯಾಣಿಕರು ಬೆಳಗಾವಿಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು.

ಬೆಳಗಾವಿಯಿಂದ ದೆಹಲಿಗೆ ಆ.೧೩ರಂದು ಮೊದಲ ಬಾರಿಗೆ ವಿಮಾನ ಸಂಚಾರ ಪ್ರಾರಂಭಗೊಂಡಿತು. ಮೊದಲು ವಾರಕ್ಕೆ ೨ ಬಾರಿ ಸಂಚಾರ ಕೈಗೊಳ್ಳಲಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಸಂಚಾರವನ್ನು ವಾರಕ್ಕೆ ಮೂರು ಸಲಕ್ಕೆ ಏರಿಸಲಾಯಿತು. ಪ್ರಸ್ತುತ ಗುರುವಾರದಿಂದ ವಾರಕ್ಕೆ ನಾಲ್ಕು ಬಾರಿ ಬೆಳಗಾವಿ- ದೆಹಲಿ ನಡುವೆ ವಿಮಾನ ಹಾರಾಡಲಿದೆ.

ಬೆಳಗಾವಿಗೆ ವಿಮಾನ ಆಗಮಿಸಿದ ಸಂದರ್ಭದಲ್ಲಿ ಫೈಲೆಟ್ ಹಾಗೂ ಸಿಬ್ಬಂದಿಯನ್ನು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ಅವರು ಹೂ ಮಾಲೆ ಹಾಕಿ ಸ್ವಾಗತಿಸಿದರು. ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಬೆಳಗಾವಿಗೆ ಶುಭ ಸುದ್ದಿ: ದೆಹಲಿಗೆ ನೇರ ವಿಮಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button