ಪ್ರಗತಿವಾಹಿನಿ ಸುದ್ದಿ, ಮಾಂಜರಿ – ದೇಶದ ಗಡಿ ಕಾಯುವ ಸೈನಿಕರಂತೆ ಮತ್ತು ತಮ್ಮ ಪ್ರಾಣ ಬದಿಗಿಟ್ಟು ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಕಾರ್ಯ ಸಮಾಜವನ್ನು ಮೆಚ್ಚುವಂತದ್ದಾಗಿದೆ ಎಂದು ಕಾಶಿ ಜಗದ್ಗುರುಗಳಾದ ಡಾ. ಚಂದ್ರಶೇಖರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಕಾಡಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಜೊಲ್ಲೆ ಉದ್ಯೋಗ ಸಮೂಹದಿಂದ ಆಯೋಜಿಸಲಾದ ಅಂಗನವಾಡಿ ಕಾರ್ಯಕರ್ತರ ಸನ್ಮಾನ ಸಮಾರಂಭದಲ್ಲಿ ದಿವ್ಯಸಾನಿಧ್ಯದಲ್ಲಿ ಮಾತನಾಡುತ್ತಿದ್ದರು.
ನೇತೃತ್ವವನ್ನು ಶ್ರೀಶೈಲ ಜಗದ್ಗುರುಗಳಾದ ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು.
ಈ ವೇಳೆ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವೆ ಸಂಸ್ಥೆಯ ಆಶಾಜ್ಯೋತಿ ಬುದ್ದಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿ ಪ್ರಸಾದ್ ಜೊಲ್ಲೆ, ಅಂಬಿಕಾನಗರದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಬಿರೆಶ್ವರ ಸಂಸ್ಥೆಯ ನಿರ್ದೆಶಕ ಶಂಕರ ಶಾಹಿರ ಅಜಯ್ ಸೂರ್ಯವಂಶಿ ಅಮರ್ ಬೋರಗವೇ ಹಾಜರಿದ್ದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೋರೋನಾ ಮಹಾಮಾರಿ ಸೊಂಕು ತಡೆಗಟ್ಟಲು ಹಗಲಿರುಳು ಶ್ರಮಿಸುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶಶಿಕಲಾ ಜೊಲ್ಲೆ, ಇವರು ಹೆಚ್ಚಿನ ಆದ್ಯತೆ ನೀಡಿ ಪ್ರತಿಯೊಬ್ಬ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರೆಯರಿಗೆ ಪ್ರೋತ್ಸಾಹ ಧನದ ಜೊತೆಗೆ ವಿಮಾ ಸೌಭ್ಯ ಕಲ್ಪಿಸಿಕೊಡಲಾಗಿದೆ ಎಂದು ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ಹೇಳಿದರು.
ಈ ವೇಳೆ ಜೊಲ್ಲೆ ಉದ್ಯೋಗ ಸಮೂಹದಿಂದ ಚಿಕ್ಕೋಡಿ ತಾಲೂಕಿನ ಮಾಂಜರಿ ಯಡೂರ ಚಂದೂರ ಇಂಗಳಿ ಅಂಕಲಿ ಕೆರೂರ ಕಾಡಾಪೂರ ಗ್ರಾಮಗಳಲ್ಲಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡುಗೆ ಮತ್ತು ಮಕ್ಕಳಿಗೆ ಪೌಷ್ಟಿಕಾಂಶ ಮಾತ್ರೆ ವಿತರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಈರಗೌಡಾ ಪಾಟೀಳ, ನವನಾಥ ಚವ್ಹಾಣ, ಮಾಂಜರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಣ್ಣಾಸಾಹೇಬ ಯಾದವ, ಮಾಂಜರಿ ಗ್ರಾ.ಪಂ. ಅಧ್ಯಕ್ಷ ಮಾಯಾ ಭಿಲವಡೆ, ಸನತಕುಮಾರ ಪಾಟೀಲ, ಬಬನ ಭಿಲವಡೆ, ಅಣ್ಣಾಸಾಹೇಬ ಸಂಕೇಶ್ವರಿ, ದಾದಾಸೋ ಭೋಜಕರ, ಅಂಕಲಿ ಗ್ರಾ,ಪಂ. ಉಪಾಧ್ಯಕ್ಷರಾದ ತುಕಾರಾಮ ಪಾಟೀಲ, ಯಡುರವಾಡಿ ಗ್ರಾಮದ ವಾಸುದೆವ ಮೋರೆ, ಚಿದಾನಂದ ಕೋಳಿ, ಇಂಗಳಿ ಗ್ರಾಮದ ಅಜಿತ ಚಿಗರೆ, ಶಂಕರ ಪವಾರ, ಹಗೂ ಇನ್ನಿತತರರು ಹಾಜರಿದ್ದರು. ಅಜಯ ಸೂರ್ಯವಂಶೀ ಪ್ರಾಸ್ತಾವಿಕವಾಗಿ ಮಾತನಾಡಿ ದಿನೇಶ್ ಹೆದ್ದೂರೆ ಸ್ವಾಗತಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ