Kannada NewsKarnataka NewsLatest

ಚಿಗುಲೆ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣೆ ಶಿಬಿರ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಬಿಜೆಪಿ ಸಮಸ್ಯೆ ಪರಿಹಾರ ಕೇಂದ್ರ ಮತ್ತು ನಂದಾದೀಪ ಆಸ್ಪತ್ರೆ ವತಿಯಿಂದ  ತಾಲೂಕಿನ ಚಿಗುಲೆ ಗ್ರಾಮಸ್ಥರಿಗೆ ನೇತ್ರ ತಪಾಸಣೆ ಶಿಬಿರವನ್ನು ಬುಧವಾರ ಆಯೋಜಿಸಲಾಗಿತ್ತು.

 

 ಶಿಬಿರ ಉದ್ಘಾಟಿಸಿದ ಡಾ.ಸೋನಾಲಿ ಖಾನಾಪುರದಲ್ಲಿರುವ ಬಿಜೆಪಿ ಕುಂದುಕೊರತೆಗಳ ಪರಿಹಾರ ಕೇಂದ್ರದ ಕುರಿತು ತಿಳಿಸಿದರು.

Home add -Advt

ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಕನ್ನಡಕಗಳನ್ನು ಡಾ. ಸರ್ನೋಬತ್ ಪ್ರಾಯೋಜಿಸಿದ್ದಾರೆ. 90 ಮಹಿಳೆಯರು ಶಿಬಿರದ ಪ್ರಯೋಜನ ಪಡೆದರು.

ಬಿಜೆಪಿ ಕಾರ್ಯಕರ್ತರಾದ  ಗಣಪತ್ ಗಾವಡೆ, ಅನಂತ್ ಗಾವಡೆ, ಜಯದೇವ್ ಚೌಗುಲೆ, ಸಚಿನ್ ಪವಾರ್, ಲಾಡುತಾಯಿ (ಗ್ರಾಮ ಪಂಚಾಯಿತಿ ಸದಸ್ಯ), ಆನಂದ ತುಪ್ಪದ್ (ನಂದಾದೀಪ ಆಸ್ಪತ್ರೆ)  ವೇದಿಕೆಯಲ್ಲಿದ್ದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button