ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ 2019-20ನೇ ಸಾಲಿನ ಆಯವ್ಯಯ ಗುರುವಾರ ಮಂಡನೆಯಾಗಲಿದೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಬಜೆಟ್ ಸಂಬಂಧ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ.
ವಿಶೇಷವೆಂದರೆ, ಪ್ರಸ್ತುತ ಪಾಲಿಕೆ ಮೇಯರ್, ಉಪಮೇಯರ್ ಅವಧಿಯೂ ಗುರುವಾರವೇ ಅಂತ್ಯಗೊಳ್ಳಲಿದೆ. ಜೊತೆಗೆ ಪಾಲಿಕೆಯ ಎಲ್ಲ ಸದಸ್ಯರ ಸದಸ್ಯತ್ವ ಮಾರ್ಚ್ 8ರಂದೇ ಕೊನೆಗೊಳ್ಳಲಿದೆ.
ಮಾರ್ಚ್ 8ರಿಂದ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡುವ ಸಾಧ್ಯತೆ ಇದೆ. ಮಹಾನಗರ ಪಾಲಿಕೆ ವಾರ್ಡ್ ಹಂಚಿಕೆ ವಿವಾದ ನ್ಯಾಯಾಲಯದಲ್ಲಿರುವುದರಿಂದ ಸಧ್ಯಕ್ಕೆ ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ. ಹಾಗಾಗಿ 6 ತಿಂಗಳ ನಂತರ, ಮಳೆಗಾಲ ಕಳೆದ ಬಳಿಕವಷ್ಟೆ ಪಾಲಿಕೆ ಚುನಾವಣೆ ನಡೆಯಬಹುದು.