*ಕರ್ನಾಟಕದ ಅಡಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆ: ಮಹಾ ಸಿಎಂ ಜತೆ ಪ್ರಲ್ಹಾದ ಜೋಶಿ ಯಶಸ್ವಿ ಮಾತುಕತೆ*

ಕರ್ನಾಟಕದ ಅಡಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆ
ಮಹಾ ಸಿಎಂ ಜತೆ ಪ್ರಲ್ಹಾದ ಜೋಶಿ ಯಶಸ್ವಿ ಮಾತುಕತೆ
- ರಾಜ್ಯದ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಮುಂದಾದ ಕೇಂದ್ರ ಸಚಿವರು
- ಅಡಕೆ ಸಾಗಣೆ ವಾಹನ ಬಿಡುಗಡೆಗೆ ದೇವೇಂದ್ರ ಫಡ್ನವೀಸ್ ಸಮ್ಮತಿ
ಪ್ರಗತಿವಾಹಿನಿ ಸುದ್ದಿ/ ನವದೆಹಲಿ: ಕರ್ನಾಟಕದ ಅಡಕೆ ಬೆಳೆಗಾರರ ಬೆನ್ನಿಗೆ ನಿಂತಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ, ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಅಡಕೆ ಸರಕುಳ್ಳ ವಾಹನಗಳ ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಯಶಸ್ವಿ ಮಾತುಕತೆ ನಡೆಸಿದ್ದಾರೆ.
ರಾಜ್ಯ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಧಾವಿಸಿದ ಜೋಶಿ, ಮಹಾರಾಷ್ಟ್ರದಲ್ಲಿ ರಾಜ್ಯದ ಅಡಕೆ ಸರಕುಳ್ಳ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ಅಲ್ಲಿನ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಚರ್ಚಿಸಿ ಬಿಡುಗಡೆಗೆ ಮನವೊಲಿಸಿದರು. ಈ ಮೂಲಕ ಕರ್ನಾಟಕದ ರೈತರ ಮತ್ತು ಅಡಕರ ವರ್ತಕರ, ಪ್ರಮುಖ ಅಡಕೆ ಸಹಕಾರಿ ಸಂಸ್ಥೆಗಳ ಸಮಸ್ಯೆ ಪರಿಹರಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸಿಎಂ ಫಡ್ನವೀಸ್, ತಮ್ಮ ರಾಜ್ಯದಲ್ಲಿ ತಡೆಹಿಡಿದಿರುವ ಕರ್ನಾಟಕದ ಅಡಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಮುಂದಿನ ದಿನಗಳಲ್ಲೂ ಅಡಕೆ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಸಹ ಹೇಳಿದ್ದಾರೆ.
ಏನಿದು ಸಮಸ್ಯೆ?: ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ ಅಡಕೆ. ರಾಜ್ಯದಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಕೆ ರವಾನೆ ಆಗುತ್ತಿತ್ತು. ಆದರೆ, ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಎಲ್ಲೆಡೆ ಕರ್ನಾಟಕದ ಅಡಕೆ ಸಾಗಣೆ ವಾಹನಗಳನ್ನು ತಪಾಸಣೆಗೆಂದು ದಿನಗಟ್ಟಲೆ ತಡೆಹಿಡಿಯಲಾಗುತ್ತಿತ್ತು. ಹೀಗಾಗಿ ಕರ್ನಾಟಕದ ರೈತರು ಮತ್ತು ವರ್ತಕರು, ಅಡಕೆ ಸಹಕಾರಿ ಸಂಸ್ಥೆಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಅಲ್ಲದೇ, ಅಡಕೆ ಹಾನಿಗೊಳಗಾಗಿ ಬೆಳೆಗಾರರಿಗೆ ತೀವ್ರ ಆರ್ಥಿಕ ನಷ್ಟವೂ ಎದುರಾಗಿತ್ತು.
ಈ ಹಿನ್ನಲೆಯಲ್ಲಿ ಕರ್ನಾಟಕದ ಪ್ರಮುಖ ಅಡಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ತುಮ್ಕೋಸ್ (TUMCOS) ಹಾಗೂ ರಾಜ್ಯ ಅಡಕೆ ಸಹಕಾರಿ ಮಹಾಮಂಡಳದ ನಿಯೋಗವು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿತ್ತು. ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಅಡಕೆ ಸಾಗಣೆ ವಾಹನಗಳ ಬಿಡುಗಡೆಗೆ ಮನವಿ ಮಾಡಿತ್ತು.
ಹೀಗಾಗಿ ಕೇಂದ್ರ ಸಚಿವ ಜೋಶಿ ಅವರು ಮಂಗಳವಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರನ್ನು ದೆಹಲಿಯಲ್ಲೇ ಭೇಟಿ ಮಾಡಿ, ಚರ್ಚಿಸಿದರಲ್ಲದೆ, ಕರ್ನಾಟಕದ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯದ ಅಡಕೆ ಸರಕುಳ್ಳ ವಾಹನಗಳನ್ನು ತಡೆಯದಂತೆ ಯಶಸ್ವಿ ಮಾತುಕತೆ ನಡೆಸಿದರು. ಮಹಾರಾಷ್ಟ್ರ ಸಿಎಂ ಸಮ್ಮತಿಸಿದ್ದರಿಂದ ರಾಜ್ಯದ ರೈತರ ಪರವಾಗಿ ಧನ್ಯವಾದ ಸಹ ಅರ್ಪಿಸಿದರು ಸಚಿವ ಪ್ರಲ್ಹಾದ ಜೋಶಿ.
A good news for Arecanut traders: Maharashtra to release Karnataka Arecanut trucks after Joshi-Fadnavis talks
New Delhi, July 7:
The transport of arecanut consignments from Karnataka through Maharashtra is set to resume without disruption after Union Minister for Food and Public Distribution Pralhad Joshi held successful talks with Maharashtra Chief Minister Devendra Fadnavis on Tuesday.
Joshi intervened following complaints from Karnataka’s arecanut growers, traders and cooperative institutions that trucks carrying arecanut to northern Indian markets were being detained for days at various checkpoints in Maharashtra under the pretext of inspections. The prolonged delays had caused significant hardship to farmers, traders and cooperative societies, besides resulting in damage to the produce and financial losses.
Responding positively to Joshi’s request, Fadnavis promised that all Karnataka arecanut consignments currently being held in Maharashtra would be released immediately. He also assured that necessary measures would be put in place to ensure that the movement of arecanut vehicles would not face similar obstacles in the future.
The issue was brought to Joshi’s attention by a delegation representing Karnataka’s leading arecanut cooperative institutions—CAMPCO, MAMCOS, TUMCOS and the Karnataka State Arecanut Cooperative Federation. The delegation, led by Shivamogga MP B.Y. Raghavendra, urged the Union Minister to intervene and facilitate the release of the detained vehicles.
Acting on the request, Joshi met Fadnavis in New Delhi on Tuesday and explained the difficulties being faced by Karnataka’s arecanut growers and traders. The discussions resulted in a positive outcome, with the Maharashtra Chief Minister agreeing to ensure the immediate release of the detained consignments and smoother movement of arecanut transport in the days ahead.
Expressing gratitude on behalf of Karnataka’s farmers, Joshi thanked Fadnavis for his prompt and positive response, stating that the decision would provide significant relief to thousands of arecanut growers, traders and cooperative institutions dependent on uninterrupted transport to markets across the country.


