Kannada NewsKarnataka News

ಶ್ರೀರಾಮ ನವಮಿ ನಿಮಿತ್ಯ ನಿಪ್ಪಾಣಿಯಲ್ಲಿ ಭವ್ಯ ಶೋಭಾಯಾತ್ರೆ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ನಗರದಲ್ಲಿ ಇಂದು ಶ್ರೀ ರಾಮ ನವಮಿ ಅಂಗವಾಗಿ ಶ್ರೀರಾಮ ಸೇನಾ ಹಿಂದೂಸ್ಥಾನ ವತಿಯಿಂದ ಭವ್ಯ ಶೋಭಾಯಾತ್ರೆಯನ್ನು ಆಯೋಜಿಸಿಸಲಾಗಿತ್ತು. ಮುಜರಾಯಿ, ವಕ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಶೋಭಾ ಯಾತ್ರಗೆ ಕುಟುಂಬ ಸಮೇತ ಆಗಮಿಸಿ ಶ್ರೀ ರಾಮ
ಮಂದಿರದಲ್ಲಿ ದೀಪ ಬೆಳಗಿಸಿ ಚಾಲಣೆ ನೀಡಿದರು.

ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಮತ್ತು ರಾಸಾಯಿ ಶೇಂಡೂರನ ಓಂ ಶಕ್ತಿ ಮಠದ ಅರುಣಾನಂದ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಈ ಶೋಭಾಯಾತ್ರೆಯಲ್ಲಿ ಪುರುಷರು ಕೇಸರಿ ಪೇಟ ಧರಿಸಿ, ಯುವತಿಯರು, ಮಹಿಳೆಯರು ಕೇಸರಿ ಸೀರೆ
ತೊಟ್ಟು ಭಾಗವಹಿಸಿದ್ದರು. ನಗರದ ಶ್ರೀ ರಾಮ ಮಂದಿರದಿಂದ ಶೋಭಾಯಾತ್ರೆ ಪ್ರಾರಂಭವಾಯಿತು.
ಹಳೆ ಪಿ.ಬಿ. ರಸ್ತಯಿಂದ ಸಾಗಿ, ಅಶೋಕ ನಗರ, ಕೋಠಿವಾಲೆ ಕಾರ್ನರ್, ಗುರುವಾರ ಪೇಟೆ,
ಶಿವಾಜಿ ವೃತ್ತದಿಂದ ಮತ್ತೆ ಶ್ರೀರಾಮ ಮಂದಿರಕ್ಕೆ ಬಂದು ಮುಕ್ತಾಯಗೊಂಡಿತು.

ಈ ಶೋಭಾಯಾತ್ರೆಯಲ್ಲಿ ಸ್ಥಳೀಯರಿಂದ ಹಲವಾರು ರೂಪಕಗಳನ್ನು ಸಾದರಪಡಿಸಲಾಗಿತ್ತು. ಅಲ್ಲದೆ
ವಿವಿಧ ರಾಜ್ಯಗಳಿಂದ ರಾಮಲೀಲೆ, ನವಿಲು ಕುಣಿತ ಮೊದಲಾದ ರೂಪಕಗಳು ಆನೆ, ಕುದುರೆಗಳು, ಈ
ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಬಸವಪ್ರಸಾದ ಜೊಲ್ಲೆ ಯುವಕರ ಜತೆ ಡಿ.ಜೆ. ಗೆ
ಹೆಜ್ಜೆ ಹಾಕಿದರು.

ಶೋಭಾಯಾತ್ರೆಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಸವಜ್ಯೋತಿ ಯುಥ ಫೌಂಡೆಶನ್ ನ
ಅಧ್ಯಕ್ಷ ಬಸಪ್ರಸಾದ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಶ್ರೀರಾಮ ಸೇನೆ ಹಿಂದೂಸ್ಥಾನ್
ರಾಷ್ಟ್ರೀಯ ಅಧ್ಯಕ್ಷ ರಮಾಕಾಂರ ಕೋಂಡೂಸ್ಕರ್, ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ನಿಲೇಶ
ಹತ್ತಿ, ಸಹಕಾರ ರತ್ನ ಚಂದ್ರಕಾAತ ಕೋಠಿವಾಲೆ, ನಾರಾಯಣಿ ಉದ್ಯೋಗ ಸಮೂಹದ ಅಧ್ಯಕ್ಷ
ದಿಲೀಪ ಚವಾಣ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ
ಸಮೀತಿ ಚೇವರಮನ್ ರಾಜೇಂದ್ರ ಗುಂಡೆಶಾ, ಸಮಾಮಠದ ಚೇರ್ಮನ್ ಸುರೇಶ ಶೆಟ್ಟಿ, ಪ್ರನವ
ಶಹಾ, ಪ್ರತಾಪ ಪಟ್ಟಣಶೆಟ್ಟಿ ಮೊದಲಾದವರು ಸೇರಿದಂತೆ ಸಂಘಟನೆಯ ಸದಸ್ಯರು
ಉಪಸ್ಥಿತರಿದ್ದರು.

ಏ.10 ರಂದು ನಿಪ್ಪಾಣಿಯಲ್ಲಿ ಭವ್ಯ ಶೋಭಾಯಾತ್ರೆ – ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button