ವೈವಿಧ್ಯತೆಯ ಮನೋಹರ ಲೋಕ ತೆರೆದಿಟ್ಟ ಆಭರಣ ಪ್ರದರ್ಶನ; ದೀಪ್ತಿ ಕೋರೆ- ಆರಾಧ್ಯ ಕಲಾಕೌಶಲದ ಕನ್ನಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೊಸ ಹೊಸ ವಿನ್ಯಾಸಗಳು, ನಾನಾ ವೈವಿಧ್ಯಗಳು, ಮೊದಲ ನೋಟಕ್ಕೆ ಕಣ್ಮನ ಸೆಳೆಯುವ ವೈಶಿಷ್ಟ್ಯಗಳು.. ಇವೆಲ್ಲವೂ ಮೇಳೈಸಿರುವ ಪ್ರದರ್ಶನವೊಂದು ಬೆಳಗಾವಿಯಲ್ಲಿ ಆಭರಣ ಪ್ರಿಯರನ್ನು ತನ್ನತ್ತ ಸೆಳೆದು ಮನದಣಿಸುತ್ತಿದೆ.
ಅಂತರ್ಜಾಲವನ್ನೆಲ್ಲ ಜಾಲಾಡಿದರೂ, ಹತ್ತಾರು ಕಡೆ ಸುತ್ತಿದರೂ ಚಿತ್ತದೊಳಗಿರುವ ವಿನ್ಯಾಸ ಲಭ್ಯವಾಗದೆ ನಿರಾಸೆ ಹೊಂದಿದವರಿಗೆ ಒಂದೇ ನೋಟದಲ್ಲಿ ಆಕರ್ಷಿಸುವ ಆಭರಣಗಳ ಈ ಪ್ರದರ್ಶನ ನಡೆದಿದ್ದು ಬೆಳಗಾವಿಯ ಯುಕೆ 27 ಹೋಟೆಲ್ ನಲ್ಲಿ. ಭಾನುವಾರ ದೀಪ್ತಿ ಕೋರೆ ಆರಾಧ್ಯ ಅವರು ಡಿಯಾನಿ- ‘ದಿ ಫೆಸ್ಟಿವ್ ಎಡಿಟ್’ನ್ನು ಆಯೋಜಿಸಿದ್ದಾರೆ.
ಈ ಪ್ರದರ್ಶನ ಸೋಮವಾರವೂ ಮುಂದುವರಿಯಲಿದ್ದು, ಬೆಳಗ್ಗೆ 11 ರಿಂದ ಸಂಜೆ 7ರವರೆಗೆ ಆಭರಣಾಸಕ್ತರ ವೀಕ್ಷಣೆಗೆ ಅವಕಾಶವಿದೆ.
ಎಕ್ಸ್ ಕ್ಲೂಸೀವ್, ನಾನಾ ಮಾದರಿಗಳ ಡೈಮಂಡ್ಸ್, ಜೇಮ್ಸ್, ಕ್ರಷಸ್, ಪಿಂಕ್ ಗೋಲ್ಡ್, ವೈಟ್ ಗೋಲ್ಡ್ ಆಭರಣಗಳು ಅಲಂಕಾರ ಪ್ರಿಯರ ಮನ ಸೆಳೆಯುತ್ತಿವೆ.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಪುತ್ರಿ ದೀಪ್ತಿ ಕೋರೆ ಆರಾಧ್ಯ ಅವರು ವಿದೇಶದಲ್ಲಿ ಶಿಕ್ಷಣ, ತರಬೇತಿ ಪಡೆದು ತವರು ನಾಡಿನಲ್ಲಿ ತಮ್ಮ ಕೌಶಲವನ್ನು ಈ ಪ್ರದರ್ಶನದ ಮೂಲಕ ಅನಾವರಣಗೊಳಿಸಿದ್ದಾರೆ.
ಅವರ ಮಾವ ಮಲ್ಲೋಕ್ ಆರಾಧ್ಯ ಅವರು ಸೊಸೆಯ ಕಲಾ ಕೌಶಲಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದೀಪ್ತಿ ಅವರು ಪರಿಚಯಿಸಿದ ಎಲ್ಲ ಡಿಸೈನ್‌ಗಳು ಎಲ್ಲರ ಮನಮೋಹಕಗೊಳಿಸುತ್ತವೆ. ಅವರ ಕೌಶಲ ಪ್ರಶಂಸಾರ್ಹ ಎಂದು ಅವರು ಹೇಳಿದ್ದಾರೆ.
“ಇದು ದೀಪ್ತಿ ಅವರಿಗೆ ರಕ್ತಗತವಾಗಿ ಒಲಿದ ಕಲೆ. ಮನಸ್ಸಿದ್ದಲ್ಲಿ ಮಾರ್ಗವಿದೆ ಎಂಬಂತೆ ಅವರು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಬೆಳಗಾವಿಗರ ಪ್ರೋತ್ಸಾಹ ಈ ಕಲೆಗೆ ಇನ್ನೂ ಹೆಚ್ಚು ವ್ಯಾಪಕತೆ ನೀಡಲಿದೆ” ಎನ್ನುತ್ತಾರೆ ದೀಪ್ತಿ ಅವರ ಅತ್ತೆ.
https://pragati.taskdun.com/politics/dr-prabhakar-kore-amritamahotsava/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ