ಪತ್ನಿ ಮಾತುಗಳಿಂದ ಬಚಾವಾಗಲು 62 ವರ್ಷ ಕಿವುಡ, ಮೂಗನಂತೆ ನಟಿಸಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಸದಾ ವಟಗುಡುವ ಪತ್ನಿಯ ಮಾತುಗಳಿಂದ ಬಚಾವಾಗಲು ವ್ಯಕ್ತಿಯೊಬ್ಬರು ಬರೊಬ್ಬರಿ 62 ವರ್ಷ ಕಿಡುವ, ಮೂಗನಂತೆ ವರ್ತಿಸಿರುವ ವಿಲಕ್ಷಣ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಸುದೀರ್ಘ ಕಾಲದ ನಟನೆ ಈಗ ಪತಿಯ ಪಾಲಿಗೆ ಸಂದಿಗ್ಧ ತಂದೊಡ್ಡಿದ್ದು ಪತಿಗೆ ವಿಚ್ಛೇದನ ನೀಡುದಕ್ಕಾಗಿ 80 ವರ್ಷದ ಪತ್ನಿ ಡೊರೊತಿ ಕೋರ್ಟ್ ಮೆಟ್ಟಿಲೇರಿದ್ದಾರೆ.
62 ವರ್ಷಗಳ ಹಿಂದೆ ಬೇರಿ ಡಾಸನ್ (84 ) ಅವರು ಡೊರೋತಿ (80) ನ್ನು ಅವರೊಂದಿಗೆ ವಿವಾಹವಾಗಿದ್ದರು. ಆದರೆ ಪತ್ನಿ ವಿಪರೀತ ಮಾತನಾಡುವವಳೆಂದು ಮೊದಲೇ ಅರಿತ ಅವರು ಮೂಕ, ಕಿವುಡನಂತೆ ವರ್ತಿಸುತ್ತ ಸಾಗಿದರು. ಒಂದು ಬಾರಿಯ ನಾಟಕದ ಬಣ್ಣ ಬಯಲಾಗುವ ಭೀತಿಯಿಂದ ಹಾಗೆಯೇ ಮುಂದುವರಿಸುತ್ತ ಹೋಗುವುದು ಅನಿವಾರ್ಯವಾಯಿತು. ದಿನಗಳು ಕಳೆಯುತ್ತ ಬರೊಬ್ಬರಿ 62 ವರ್ಷಗಳೇ ಉರುಳಿ ಹೋದವು.
ಗಂಡ ನಿಜಕ್ಕೂ ಕಿವುಡ ಹಾಗೂ ಮೂಕ ಎಂದು ಅರಿತ ಡೊರೊತಿ ಆತನೊಂದಿಗೆ ವ್ಯವಹರಿಸಲೆಂದೇ ಕಿವುಡರು ಹಾಗೂ ಮೂಕರು ಬಳಸುವ ಭಾಷೆ ಸಹ ಕಲಿತು ಅದರಲ್ಲೇ ವ್ಯವಹರಿಸುತ್ತಿದ್ದಳು.
ಇತ್ತೀಚೆಗೆ ಈ ಗುಟ್ಟು ರಟ್ಟಾಗುತ್ತಿದ್ದಂತೆ ಕೆರಳಿದ ಡೊರೊತಿ ಈಗ ನ್ಯಾಯ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಯುವಕನ ಮೇಲೆ ಯುವತಿಯರಿಂದಲೇ ಲೈಂಗಿಕ ದೌರ್ಜನ್ಯ




