ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ಅವರು ತಮಗೆ ಸ್ವಲ್ಪವೂ ಕಾಳಜಿಯೂ ಇಲ್ಲ, ಸಮಯ ಪ್ರಜ್ಞೆಯೂ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಅವರದೇ ಸ್ವಂತ ಜಿಲ್ಲೆಯಲ್ಲಿ ನೇಕಾರರು ಸಂಕಷ್ಟಕ್ಕೆ ಸಿಲುಕಿ, ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಗಮನ ಹರಿಸದ ಸಚಿವ ಅಂತೂ ಟೀಕೆಗಳ ಮಹಾಪೂರ ಬಂದ ನಂತರ ನೇಕಾರರ ಮನೆಗೆ ಭೇಟಿ ನೀಡುವ ನಿರ್ಧಾರ ಮತ್ತು ನೇಕಾರರ ಮುಖಂಡರ ಜೊತೆ ಚರ್ಚಿಸುವ ನಿರ್ಧಾರ ಪ್ರಕಟಿಸಿದರು.
ಅದರಂತೆ ಮಂಗಳವಾರ ಬೆಳಗ್ಗೆ ನಿಗದಿಯಂತೆ 11 ಗಂಟೆಗೆ ಯಮಕನಮರಡಿಯಲ್ಲಿ ಆತ್ಮಹತ್ಯ ಮಾಡಿಕೊಂಡ ನೇಕಾರನ ಮನೆಗೆ ಬರಬೇಕಿತ್ತು. 12.30ಕ್ಕೆ ಬೆಳಗಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೇಕಾರನ ಮನೆ ಭೇಟಿ ನಂತಹ ಪ್ರವಾಸಿ ಮಂದಿರದಲ್ಲಿ ನೇಕಾರ ಮುಖಂಡರ ಜೊತೆ ಸಭೆ ನಡೆಸಬೇಕಿತ್ತು.
ಆದರೆ ಸಚಿವರು ಹುಕ್ಕೇರಿ ತಾಲ್ಲೂಕಿನ ಯಮಕನಮರಡಿಯ ದಿವಂಗತ ಶಂಕರ್ ಬಾಮನ್ ಶೆಡ್ ಶ್ಯಾಳಿ ಇವರ ಮನೆಗೆ 11 ಗಂಟೆಗೆ ಭೇಟಿ ನೀಡಿದ್ದಾರೆ. ಇದೀಗ ಶೆಡ್ ಶ್ಯಾಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ.
ನಂತರ ಅವರು ಬೆಳಗಾವಿ ನೇಕಾರನ ಮನೆಗೆ ತೆರಳಿ, ಆ ನಂತರ ಸಭೆ ನಡೆಸಬೇಕಿದೆ. ಸಚಿವರು ಬರುತ್ತಾರೆ ಎಂದು ನೇಕಾರರು, ಅಧಿಕಾರಿಗಳು ಕಾಯುತ್ತಲೇ ಇದ್ದಾರೆ. ಸಚಿವರಿಗೆ ನೇಕಾರರ ಬಗೆಗೆ ಯಾವ ಕಾಳಜಿಯೂ ಇಲ್ಲ, ಸಮಯ ಪ್ರಜ್ಞೆಯೂ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ