ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ತಾನೇ ಪಿಎಚ್.ಡಿ ಸಂಶೋಧನೆಯನ್ನು ಮುಗಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದ ಡಾ. ಮಲ್ಲಪ್ಪ ಕುರಿ ಅವರು ಕೊರೋನಾಗೆ ಬಲಿಯಾಗಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿತ್ತು.
ರಾಯಬಾಗ ತಾಲೂಕಿನ ಇಟ್ನಾಳದವರಾಗಿದ್ದ ಮಲ್ಲಪ್ಪ, ಕಳೆದ ತಿಂಗಳಷ್ಟೇ ಅವರು ’ಕನ್ನಡ ಕಥನ ಸಾಹಿತ್ಯದಲ್ಲಿ ದೇವದಾಸಿ ಸಮಸ್ಯೆ’ ಎನ್ನುವ ವಿಷಯ ಕುರಿತು ಸಂಶೋಧನೆಯನ್ನು ಮುಗಿಸಿದ್ದರು.
ಅವರ ಈ ಅಕಾಲಿಕ ಸಾವಿಗೆ ವಿವಿಯ ಅಧ್ಯಯನ ಸಂಸ್ಥೆ ಆಘಾತ ವ್ಯಕ್ತಪಡಿಸಿದೆ. ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿದ್ದ ಡಾ. ಮಲ್ಲಪ್ಪ ಕುರಿ ಅವರು ಸ್ನಾತಕೋತ್ತರ ಶಿಕ್ಷಣವನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿಯೇ ಮುಗಿಸಿದ್ದರು, ಕಡುಬಡತನದಲ್ಲಿ ಬೆಳೆದು ಬಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಸ್ನೇಹಜೀವಿಯಾದ ಅವರ ಸರಳ ವ್ಯಕ್ತಿತ್ವವು ಅನುಕರಣೀಯವಾಗಿತ್ತು. ಅವರ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅವರ ಕುಟುಂಬ ವರ್ಗದವರಿಗೆ ಹಾಗೂ ಅವರ ಸ್ನೇಹ ಬಳಗಕ್ಕೆ ನೀಡಲಿ ಎಂದು ಅಧ್ಯಯನ ಸಂಸ್ಥೆಯ ವತಿಯಿಂದ ಪ್ರಾರ್ಥಿಸಿ, ಶೃದ್ಧಾಂಜಲಿ ಸಲ್ಲಿಸಲಾಯಿತು.
ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ. ಎಸ್. ಎಂ. ಗಂಗಾಧರಯ್ಯ, ಪ್ರಾಧ್ಯಾಪಕರಾದ ಪ್ರೊ. ಗುಂಡಣ್ಣ ಕಲಬುರ್ಗಿ, ಅಧ್ಯಾಪಕರುಗಳಾದ ಡಾ. ಗಜಾನನ ನಾಯ್ಕ, ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಮಹೇಶ ಗಾಜಪ್ಪನವರ, ಡಾ. ಶೋಭಾ ನಾಯಕ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಪಿ. ನಾಗರಾಜ ಬೋಧಕೇತರ ಸಿಬ್ಬಂದಿಯಾದ ಫಕೀರಪ್ಪ ಸೊಗಲದ, ಜಕ್ಕಮ್ಮ ದೊಡಶ್ಯಾನಟ್ಟಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮೃತರಿಗಾಗಿ ಕಂಬನಿ ಮಿಡಿದರು.
ಕೊರೋನಾಕ್ಕೆ ಚನ್ನಮ್ಮ ವಿವಿ ಪ್ರಾಧ್ಯಾಪಕ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ