
ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ದುರಂತದ ಘಟನೆಗಳು ಜನಮಾನಸದಿಂದ ಮಾಸುವ ಮುನ್ನವೇ ತಮಿಳುನಾಡಿನ ತಿರುಪತ್ತೂರಿನಲ್ಲಿ ಇನ್ನೊಂದು ರೈಲು ದುರಂತ ನಡೆಯುವುದು ಲೋಕೊ ಪೈಲಟ್ ಸಮಯಪ್ರಜ್ಞೆಯಿಂದ ಕೈತಪ್ಪಿದೆ.
ರೈಲು ಹಳಿಗಳ ಮೇಲೆ ಕಾಂಕ್ರೀಟ್ ಅವಶೇಷಗಳನ್ನು ಹಾಕಿರುವುದನ್ನು ಗಮನಿಸಿದ ಕಾವೇರಿ ಎಕ್ಸ್‌ಪ್ರೆಸ್‌ನ ಲೋಕೊ ಪೈಲಟ್ ರೈಲನ್ನು ನಿಲ್ಲಿಸಿದ್ದರಿಂದ ಸಂಭವನೀಯ ರೈಲು ಅಪಘಾತವನ್ನು ತಪ್ಪಿಸಲಾಗಿದೆ.
“ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಪ್ರಕಾರ ಸಾಮಾನ್ಯವಾಗಿ ಹಳಿ ಬಳಿಯ ದೇವಸ್ಥಾನದಲ್ಲಿ ಉಳಿಯುವ ಮಾನಸಿಕ ಅಸ್ವಸ್ಥ ವ್ಯಕ್ತಿ ಇದನ್ನು ಮಾಡಿರಬಹುದು” ಎಂದು ಚೆನ್ನೈ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ಒಡಿಶಾದಲ್ಲಿ ರೈಲು ದುರಂತ ನಡೆದ ದಿನವೇ ತಮಿಳುನಾಡಿನಲ್ಲಿ ರೈಲು ಹಳಿಯ ಮೇಲೆ ಟಯರ್ ಗಳನ್ನು ಇಟ್ಟು ಕುಚೋದ್ಯ ಮೆರೆದಿದ್ದರು. ಈ ವೇಳೆಗೂ ಲೋಕೋ ಪೈಲಟ್ ದೂರದಿಂದ ಗಮನಿಸಿ ರೈಲು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದರು. ಬರಿ ತಿಂಗಳಲ್ಲೇ ಇಂಥ ಇನ್ನೊಂದು ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ