ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಮಧ್ಯಪ್ರದೇಶದ ಗುನಾ ಜಿಲ್ಲೆಯ ಏರ್ ಸ್ಟ್ರಿಪ್ ನಲ್ಲಿ ಭಾನುವಾರ (ಆ.11) ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಆಸನಗಳ ಸೆಸ್ನಾ 152 ವಿಮಾನವು ಮಧ್ಯಾಹ್ನ 1.30 ರ ಸುಮಾರಿಗೆ ಪತನಗೊಂಡಿತು. ಇಂಜಿನ್ ವೈಫಲ್ಯದಿಂದ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಅಪಘಾತಕ್ಕೀಡಾದ ವಿಮಾನ ಬೆಳಗಾವಿ ಏವಿಯೇಷನ್‌ಗೆ ಸೇರಿದ್ದಾಗಿದೆ ಎಂದು ಗುನಾ ಕ್ಯಾಂಟ್ ಪೊಲೀಸ್ ಠಾಣೆಯ ಉಸ್ತುವಾರಿ ದಿಲೀಪ್ ರಜೋರಿಯಾ ಹೇಳಿದ್ದಾರೆ.
ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಗಾಯಗಳಾಗಿದ್ದು, ಅವರನ್ನು ಗುನಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ. ಪರೀಕ್ಷೆ ಮತ್ತು ನಿರ್ವಹಣೆಗಾಗಿ ವಿಮಾನವು ಕೆಲವು ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕ್ಯಾಪ್ಟನ್ ವಿಸಿ ಠಾಕೂರ್ ಹಾಗೂ ಮತ್ತೊಬ್ಬ ಪೈಲಟ್ ಗಾಯಗೊಂಡಿದ್ದಾರೆ. ಅಕಾಡೆಮಿ ಅಧಿಕಾರಿಗಳು, ಕಂಟೋನ್ವೆಂಟ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರೀಕ್ಷೆ ಮತ್ತು ನಿರ್ವಹಣೆಗಾಗಿ ವಿಮಾನವನ್ನು ಶಾ-ಶಿಬ್ ಅಕಾಡೆಮಿಗೆ ತರಲಾಯಿತು. ಇಬ್ಬರು ಪೈಲಟ್‌ಗಳು ಹೈದರಾಬಾದ್ ಮೂಲದವರಾಗಿದ್ದು, ಬೆಳಗಾವಿ ಏವಿಯೇಷನ್‌ನಿಂದ ಬಂದವರು. ಪೈಲಟ್‌ಗಳು ಶನಿವಾರ ಗುನಾಗೆ ಬಂದಿದ್ದರು. ಗಾಯಗೊಂಡಿರುವ ಇಬ್ಬರು ಪೈಲಟ್‌ಗಳು ಹೈದರಾಬಾದ್ ಮೂಲದವರು ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ