Latest

ಹೃದಯಾಘಾತಕ್ಕೊಳಗಾಗಿ ಎರಡನೇ ತರಗತಿ ವಿದ್ಯಾರ್ಥಿ ಸಾವು

ಪ್ರಗತಿವಾಹಿನಿ ಸುದ್ದಿ, ಸುಳ್ಯ: ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಕುಂಟಿಕಾನ ನಿವಾಸಿ ಮೋಕ್ಷಿತ್ ಕೆ.ಸಿ. ಮೃತಪಟ್ಟ ಬಾಲಕ. ಈತ ಅರಮಡ್ನೂರು ಗ್ರಾಮದ ಕುಕ್ಕುಜಡ್ಕ ಸರಕಾರಿ ಹಿರಿಯ ಪ್ರಾಥಮಿಕ ಸಾಲೆಯ ವಿದ್ಯಾರ್ಥಿ.

ಶಾಲೆಗೆ ಬಂದಿದ್ದ ಬಾಲಕನಲ್ಲಿ ಮಧ್ಯಾಹ್ನ ಜ್ವರ ಕಾಣಿಸಿಕೊಂಡಿದೆ. ಕೂಡಲೆ ಶಿಕ್ಷಕರು ಮೊಬೈಲ್ ಮೂಲಕ ಪಾಲಕರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ತಕ್ಷಣ ಶಾಲೆಗೆ ಧಾವಿಸಿದ ತಂದೆ ಚಂದ್ರಶೇಖರ ಆಚಾರ್ಯ ಅವರು ಶಾಲಾ ಆವರಣ ತಲುಪುತ್ತಿದ್ದಂತೆ ಬಾಲಕ ಮೋಕ್ಷಿತ್ ತಂದೆಯೆದುರೇ ಕುಸಿದು ಬಿದ್ದಿದ್ದಾನೆ.

ಕೂಡಲೆ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಗುರಿಪಡಿಸಿದರೂ ಬಾಲಕ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ. ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Home add -Advt

ಬಸ್ ಡಿಕ್ಕಿ; ಬೈಕ್ ಸವಾರ ಸಾವು

Related Articles

Back to top button