Kannada NewsLatestNationalPolitics

*ಪ್ರಧಾನಿ ಮೋದಿ ಜೀವನ ಸಾಧನೆ ಕುರಿತ ಬ್ರೈಲ್ ಲಿಪಿಯ ಕೃತಿ ಬಿಡುಗಡೆ*

ಹುಬ್ಬಳ್ಳಿಗೆ ಹೆಮ್ಮೆಯ ಹಿರಿಮೆ: ಸಚಿವ ಪ್ರಹ್ಲಾದ ಜೋಶಿ ಖುಷಿ

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಜೀವನ ಮತ್ತು ಕೃತಿಗಳ ಕುರಿತು ಬ್ರೈಲ್ ಲಿಪಿಯಲ್ಲಿ ಬರೆಯಲಾದ ‘A Promised Nation Hon’ble Shri Narendra Modi- the Maker of New India’ ಪುಸ್ತಕವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದಾರೆ.

ವಿಶೇಷವೆಂದರೆ ಪ್ರಧಾನಿ ಮೋದಿಜಿ ಬಗ್ಗೆ ಬರೆದಿರುವ ಈ ಕೃತಿಯ ಪ್ರಕಾಶಕರು ಹುಬ್ಬಳ್ಳಿಯವರು ಎಂಬುದೇ ಹೆಮ್ಮೆಯ ಸಂಗತಿ.

ಈ ಪುಸ್ತಕವನ್ನು ನಮ್ಮ ಹುಬ್ಬಳ್ಳಿಯ VRL ಲಾಜಿಸ್ಟಿಕ್ಸ್ ಲಿಮಿಟೆಡ್ ಪ್ರಕಟಿಸಿದೆ ಎಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟರ್ ನಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಬ್ರೈಲ್ ಲಿಪಿಯಲ್ಲಿ ಬರೆಯಲಾಗಿರುವ ಈ ಪುಸ್ತಕವು ದೃಷ್ಟಿಹೀನ ಜನರಿಗೆ ಮೋದಿ ಅವರ ಜೀವನ ಪಯಣದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಈ ಮಹತ್ತರ ಹೆಜ್ಜೆಯಲ್ಲಿ ನಮ್ಮ ಹುಬ್ಬಳ್ಳಿಯೂ ಒಂದು ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದು ಪ್ರಹ್ಲಾದ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button