Kannada NewsLatest

ಮನೆ-ಮನೆಯಲ್ಲಿ ಬಸವ ಪಂಚಮಿ ಆಚರಿಸಲು ಮನವಿ

ಮನೆ-ಮನೆಯಲ್ಲಿ ಬಸವ ಪಂಚಮಿ ಆಚರಿಸಲು ಮನವಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ತಮ್ಮ – ತಮ್ಮ ಮನೆಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯನ್ನಾಗಿ ಅರ್ಥಪೂರ್ಣವಾಗಿ ಆಚರಿಸುವಂತೆ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಆ. 05 ರಂದು ಜರುಗುವ ನಾಗರಪಂಚಮಿ ಹಬ್ಬದ ಪ್ರಯುಕ್ತ ಹುತ್ತಕ್ಕೆ ಹಾಲು ಸುರಿಸಿ ಅವೈಜ್ಞಾನಿಕವಾಗಿ ಆಚರಣೆಗೆ ಜನರು ಮುಂದಾಗುತ್ತಾರೆ. ಇದರಿಂದ ಕೋಟ್ಯಾಂತರ ಲೀಟರ್ ಹಾಲು ವ್ಯರ್ಥವಾಗುತ್ತಿದೆ. ಕೇವಲ ನಮ್ಮ ರಾಜ್ಯದಲ್ಲಿ ಪ್ರತಿವರ್ಷ ಅಪೌಷ್ಠಿಕತೆಯಿಂದ 40 ಸಾವಿರಕ್ಕಿಂತ ಹೆಚ್ಚು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಈ ವ್ಯರ್ಥವಾಗುವ ಹಾಲು ಅಂತಹ ಮಕ್ಕಳಿಗೆ ಅಮೃತವಾಗಲಿದೆ. ಈ ಕುರಿತು ಜನರು ಚಿಂತಿಸಬೇಕಾಗಿರುವುದು ಅವಶ್ಯಕತೆ ಇದೆ ಎಂದರು.

ಆದ್ದರಿಂದ ಬಡ ಮಕ್ಕಳಿಗೆ, ಅನಾಥ ಆಶ್ರಮಗಳಿಗೆ ಮತ್ತು ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಈ ಹಾಲು ಹಂಚುವುದರ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಲು ಅವರು ಮನವಿ ಮಾಡಿದ್ದಾರೆ.

ನಾಗರ ಹಾವು ಮಾಂಸಾಹಾರಿ ಸರಿಸೃಪ, ಹಾಲು ನಾಗರಹಾವಿಗೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು ಮಾಡುತ್ತಿದೆ ಎಂದು ತಿಳಿಸಿದರು.
ದಿ. 05 ರಂದು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರೂ ಸಹ ರಾಜ್ಯಾದ್ಯಂತ ಬಡಮಕ್ಕಳಿಗೆ ಹಾಲು ವಿತರಿಸುವ ಮೂಲಕ ಬಸವ ಪಂಚಮಿಯನ್ನು ಆಚರಣೆ ಮಾಡಲಿದ್ದಾರೆ ಎಂದು ತಿಳಿಸಿದರು.////

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button