ಪ್ರಗತಿವಾಹಿನಿ ಸುದ್ದಿ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ಕುಟುಂಬದ ಶ್ವಾನ ಹ್ಯಾಪಿಗೆ ಅಂಬಾನಿ ಕುಟುಂಬ ಪ್ರತ್ಯೇಕ ಕಾರಿನ ವ್ಯವಸ್ಥೆ ಮಾಡಲಾಗಿದೆ.
ಕುಟುಂಬದ ಸದಸ್ಯರ ಜೊತೆ ಹ್ಯಾಪಿ ಹೊರಗೆ ಹೋಗಬೇಕಾದಲ್ಲಿ ಅದಕ್ಕೆಂದೇ 4 ಕೋಟಿ ರು. ಮೌಲ್ಯದ ಮರ್ಸಿಡಿಸ್ ಕಾರಿನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕಾರಿನೊಳಗೆ ಹ್ಯಾಪಿಯ ಭದ್ರತೆಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಇದಕ್ಕೂ ಮೊದಲು ಹ್ಯಾಪಿ ಟೊಯೋಟೋ ಫಾರ್ಚೂನರ್ ಮತ್ತು ಟೊಯೊಟೊ ವೆಲ್‌ಫೈರ್‌ನಲ್ಲಿ ಪ್ರಯಾಣಿಸುತ್ತಿತ್ತು.
ಇತ್ತೀಚೆಗೆ ನಡೆದ ಮುಕೇಶ್- ನೀತಾ ಅಂಬಾನಿ ಪುತ್ರ ಅನಂದ್ ಮದುವೆಯ ಸಂಬಂಧ ನಡೆದ ಎಲ್ಲಾ ಕಾರ್ಯಕ್ರಮಗಳ ವೇಳೆ ಹ್ಯಾಪಿ ಎಲ್ಲಾ ಸ್ಥಳಗಳಲ್ಲೂ ಮುಕ್ತವಾಗಿ ಓಡಾಡುತ್ತಿತ್ತು. ಜೊತೆಗೆ ಅದಕ್ಕೆ ವಸ್ತ್ರ ವಿನ್ಯಾಸಕರ ಮೂಲಕ ದಿನಕ್ಕೊಂದು ಸುಂದರ ವಸ್ತ್ರಗಳನ್ನು ತೊಡಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ