
ಪ್ರವಾಹ ನೀರಿನಲ್ಲಿ ಹಾವು ಕಚ್ಚಿಗಾಯಗೊಂಡ ಯುವಕ
ಪ್ರಗತಿವಾಹಿನಿ ಸುದ್ದಿ – ಅಥಣಿ : ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಕೃಷ್ಣಾ ನದಿಯ ದಡದಲ್ಲಿ ಮೇವು ಮಾಡಲೆಂದು ಹೋದ ಯುವಕ ಮೇವನ್ನು ತರುತ್ತಿರುವಾಗ ನದಿಯಲ್ಲಿ ಅಪಾರ ಪ್ರಮಾಣದ ನೀರಿನ ಸೆಳೆತಕ್ಕೆ ಸಿಲುಕಿ ಹೊರಬರುತ್ತಿರುವಾಗ ಹಾವಿನ ಕಡಿತಕ್ಕೊಳಗಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಸ್ಥಳೀಯ ನಂದೇಶ್ವರ ಗ್ರಾಮ್ ಯುವಕ ದಾನಯ್ಯ ಸಿದ್ರಾಮಯ್ಯ ಮಠಪತಿ(22) ಯುವಕ ಮೇವನ್ನು ತೆಗೆದುಕೊಂಡು ಬರುವಾಗ ಹಾವಿನ ಕಡಿತಕ್ಕೊಳಗಾಗಿದ್ದು ಗಾಯಗೊಂಡಿದ್ದರಿಂದ ಆತನಿಗೆ ಸ್ಥಳೀಯವಾಗಿ ಪ್ರಥಮ ಚಿಕಿತ್ಸೆ ಕೊಡಿಸಿ ಆತನನ್ನು ಹೆಚ್ಚಿನ ಚಿಕಿತೆಗಾಗಿ ತಾಲೂಕಾ ಸಾರ್ವಜನಿಕರ ಆಸ್ಪತ್ರೆಗೆ ಅಂಬುಲೆನ್ಸನಲ್ಲಿ ರವಾನೆ ಮಾಡಲಾಗಿದೆ. ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿರುವ ಯುವಕ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ