Latest

ಕುಡಿದು ವಿಮಾನದ ಪ್ರಯಾಣಿಕರ ಮೇಲೆ ಸೂ..ಸು ಮಾಡಿದ ವಿದ್ಯಾರ್ಥಿ!

ಪ್ರಗತಿವಾಹಿನಿ ಸುದ್ದಿ, ದೆಹಲಿ: ಕುಡಿದ ಮತ್ತಿನಲ್ಲಿದ್ದ ವಿದ್ಯಾರ್ಥಿಯೊಬ್ಬ ವಿಮಾನದಲ್ಲಿ ನಿದ್ದೆಯಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ.

ನ್ಯೂಯಾರ್ಕ್- ದೆಹಲಿಗೆ ಆಗಮಿಸುತ್ತಿದ್ದ ಅಮೆರಿಕನ್ ಏರ್ ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಯುಎಸ್ ವಿಶ್ವವಿದ್ಯಾಲಯದ ಈ ವಿದ್ಯಾರ್ಥಿ ಮದ್ಯದ ಅಮಲಿನಲ್ಲೇ ವಿಮಾನ ಏರಿದ್ದ. ಈತ ಕುಳಿತಿದ್ದ ಸೀಟ್ ಪಕ್ಕದಲ್ಲಿ ಪುರುಷ ಸಹಪ್ರಯಾಣಿಕರೊಬ್ಬರು ಕುಳಿತಿದ್ದರು. ಪಾನಮತ್ತನಾಗಿದ್ದ ವಿದ್ಯಾರ್ಥಿ ನಿದ್ದೆಯಲ್ಲಿ ಮೂತ್ರವಿಸರ್ಜನೆ ಮಾಡಿಕೊಂಡಿದ್ದ.

Home add -Advt

ಅದು ಸೋರಿಕೆಯಾಗಿ ಮೈಮೇಲೆ ಬಿದ್ದಾಗ ಎಚ್ಚೆತ್ತುಕೊಂಡು ನೋಡಿದ ಸಹಪ್ರಯಾಣಿಕ ಈ ಬಗ್ಗೆ ಸ್ವತಃ ತಾವೇ ಎಟಿಸಿಗೆ ಕರೆ ಮಾಡಿ ದೂರು ನೀಡಿದ್ದಾರೆ. ವಿಮಾನ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಬಂದು ಇಳಿಯುತ್ತಲೇ ಸಿಐಎಸ್ಎಫ್ ಸಿಬ್ಬಂದಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದಾಗ ಆತ ಕ್ಷಮೆ ಯಾಚಿಸಿದ್ದಾನೆ.

ಭವಿಷ್ಯಕ್ಕೆ ತೊಂದರೆಯಾಗದಿರಲಿ ಎಂಬ ಸದುದ್ದೇಶದಿಂದ ಸಹಪ್ರಯಾಣಿಕ ವಿದ್ಯಾರ್ಥಿ ವಿರುದ್ಧ ಪೊಲೀಸರಿಗೆ ದೂರು ನೀಡಿಲ್ಲ.

ಇತ್ತೀಚಿನ ದಿನಗಳಲ್ಲಿ ಕುಡಿದ ಅಮಲಿನಲ್ಲಿ ಸಹಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆಯ ಎರಡನೇ ಪ್ರಕರಣ ಇದಾಗಿದೆ. ಕಳೆದ ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ಸುದ್ದಿಯಾಗಿದ್ದ.

ಖತರ್ನಾಕ್ ದರೋಡೆಕೋರರ ಗ್ಯಾಂಗ್ ಬಂಧನ; ರಾಮದುರ್ಗ ಪೊಲೀಸ್ ಕಾರ್ಯಾಚರಣೆ

https://pragati.taskdun.com/gang-of-robbers-arrested-ramdurga-police-operation/

Related Articles

Back to top button