Kannada NewsKarnataka NewsUncategorized

ಕಳೆದ ಬಾರಿಗಿಂತ ದೊಡ್ಡ ಅಂತರದಿಂದ ಗೆಲುವು ನಿಶ್ಚಿತ;  ಲಕ್ಷ್ಮೀ ಹೆಬ್ಬಾಳಕರ್    

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕಳೆದ 5 ವರ್ಷದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಕಾರಣದಿಂದಾಗಿ 2018ರ ವಿಧಾನ ಸಭೆ ಚುನಾವಣೆಗಿಂತ ದೊಡ್ಡ ಪ್ರಮಾಣದ ಅಂತರದಲ್ಲಿ ಈ ಬಾರಿ ಗೆಲುವಾಗಲಿದೆ ​ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ​

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಗುರುವಾರ ಸಂಜೆ ಮುತಗಾದಲ್ಲಿ​ ಭಾರೀ ಜನಸ್ತೋಮದ ಮಧ್ಯೆ​ ಪ್ರಚಾರ ನಡೆಸಿದರು.​ ​ಈ ವೇಳೆ ಮಾತನಾಡಿ, ನಾನು ಅಭಿವೃದ್ಧಿಯನ್ನು ಮುಂದಿಟ್ಟು ನಿಮ್ಮಲ್ಲಿ ಮತ ಕೇಳುತ್ತೇನೆ. ನಿಮ್ಮ ಮನೆಯ ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ತಾಯಿಯಾಗಿ ನಿಮ್ಮ ಆಶಿರ್ವಾದ ಕೇಳುತ್ತಿದ್ದೇನೆ. ವಾಸ್ತವದ ಆಧಾರದ ಮೇಲೆ ನೀವು ನನ್ನನ್ನು ಬೆಂಬಲಿಸಿ. ಯಾವುದೇ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವಂತೆ ಮಾಡಿ ಎಂದು ಕೋರಿದರು.

ನಾನು ಯಾವುದೇ ಊರಿಗೆ ಹೋದರೂ ನೀವು ತೋರಿಸುತ್ತಿರುವ ಪ್ರೀತಿಗೆ ಮಿತಿಯೇ ಇಲ್ಲ. ನಿಮ್ಮಂತಹ ಜನರನ್ನು ಪಡೆದ ನಾನೇ ಧನ್ಯ. ಮುಂದಿನ 5 ವರ್ಷ ಅಷ್ಟೇ ಅಲ್ಲ, ಕೊನೆಯ ಉಸಿರಿರುವವರೆಗೂ ನಿಮ್ಮ ಸೇವೆ ಮಾಡುವ ಶಕ್ತಿಯನ್ನು ದೇವರು ಕೊಡಲೆಂದು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರೂ ನಿಮ್ಮ ಸಂಬಂಧಿಕರು, ಪರಿಚಯಸ್ತರ ಬಳಿ ನನ್ನ ಪರವಾಗಿ ಮತ ಯಾಚನೆ ಮಾಡಿ ಎಂದು ಹೆಬ್ಬಾಳಕರ್ ವಿನಂತಿಸಿದರು.

https://pragati.taskdun.com/congress-leaders-who-succeeded-in-persuading-ashoka-pujari/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button