ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೇವಲ 95 ದಿನಗಳ ಕಿಲಾರಿ ತಳಿಯ ಕರು ಬರೋಬ್ಬರಿ 1.5 ಲಕ್ಷಕ್ಕೆ ಮಾರಾಟವಾಗಿ ಅಚ್ಚರಿ ಮೂಡಿಸಿದ್ದು, ಇದರಿಂದ ರೈತನ ಬದುಕಿನಲ್ಲಿ ಮಂದಹಾಸ ಮೂಡಿದೆ
ಕಾಗವಾಡ ತಾಲೂಕಿನ ಕೃಷ್ಣ ಕಿತ್ತೂರು ಗ್ರಾಮದ ರೈತ ಅಶೋಕ ಜಂಬಗಿಯವರ ಮನೆಯಲ್ಲಿದ್ದ ಕಿಲಾರಿ ಆಕಳಿಗೆ ಹುಟ್ಟಿದ ಕರು ಅಲ್ಪಾವಧಿಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗಿ ಗಮನ ಸೆಳೆದಿದೆ.
ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರೆಪ್ಪ ಲಾಳಿ 1.5 ಲಕ್ಷ ಹಣ ಕೊಟ್ಟು ಖರೀದಿಸಿ, ಕರುವಿಗೆ ಬಣ್ಣ ಬಳಿದು ಅದ್ದೂರಿ ಮೆರೆವಣಿಗೆ ಮಾಡುವ ಮೂಲಕ ಸ್ವಾಗತ ಕೋರಿದ್ದಾನೆ. ಒಟ್ಟಾರೆ ಅಳಿವಿನಂಚಿನಲ್ಲಿರುವ ಕಿಲಾರಿ ತಳಿಗಳ ಅಭಿವೃದ್ಧಿಗೆ ಉತ್ತರ ಕರ್ನಾಟಕದ ರೈತರು ಹೆಚ್ಚಿನ ಒಲವು ತೋರಿದ್ದು ಗಮನಾರ್ಹವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ