*ಹೆದ್ದಾರಿಯಲ್ಲಿ ನಿಂತಿದ ಲಾರಿಗೆ ಗುದ್ದಿದ ಟಿಟಿ ವಾಹನ: 13 ಜನರ ದಾರುಣ ಸಾವು*
ಪ್ರಗತಿವಾಹಿನಿ ಸುದ್ದಿ : ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನದಿಂದ ಊರಿಗೆ ಮರಳುತ್ತಿದ್ದವರ ಟಿಟಿ ವಾಹನವೊಂದು ಅಪಘಾತಕ್ಕೀಡಾಗಿ ಮಕ್ಕಳು ಸೇರಿದಂತೆ 13 ಜನ ಸಾವನ್ನಪ್ಪಿರುವ ಭೀಕರ ದುರಂತ ಸಂಭವಿಸಿದೆ.
ಈ ಘಟನೆಯು ಹಾವೇರಿ ಜಿಲ್ಲೆಯ ಬ್ಯಾಡಗಿಯ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದಿದೆ. ಮೃತರೆಲ್ಲರೂ ಶಿವಮೊಗ್ಗ ಮೂಲದವರಾಗಿದ್ದು, ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಗುದ್ದಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನ ನುಜ್ಜು ಗುಜ್ಜಾಗಿದೆ.
ಅಪಘಾತದಲ್ಲಿ ಮೃತಪಟ್ಟವರ ವಿವರ
ಪರಶುರಾಮ್ ( 45 ), ಭಾಗ್ಯ (40), ನಾಗೇಶ್ ( 50), ವಿಶಾಲಾಕ್ಷಿ( 50), ಸುಭದ್ರಾ ಭಾಯಿ( 65), ಪುಣ್ಯ( 50), ಮಂಜುಳಾ ಭಾಯಿ( 57), ಆದರ್ಶ್ ( 23) ಡ್ರೈವರ್, ಮಾನಸಾ( 24), ರೂಪಾ( 40), ಮಂಜುಳಾ( 50) ಇನ್ನು ಘಟನೆಯಲ್ಲಿ ಮೃತಪಟ್ಟ 4 ವರ್ಷದ ಮಗು ಹಾಗೂ 6 ವರ್ಷದ ಮಗುವಿನ ಹೆಸರು ತಿಳಿದು ಬಂದಿಲ್ಲ.
ಇನ್ನು ಈ ಅಪಘಾತದಲ್ಲಿ ಆಸ್ಪತ್ರೆಯಲ್ಲಿರುವ ಗಾಯಾಳು ಅರ್ಪಿತಾ(18 ) ಸೇರಿದಂತೆ ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರ ತೆಗೆದಿರುವ ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಆಸ್ಪತ್ರೆಗೆ ಸಾಗಿಸಿದ್ದಾರೆ. ಬ್ಯಾಡಗಿ ಠಾಣೆಯ ಪೊಲೀಸರು ಸ್ಥಲಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ