ಪ್ರಗತಿವಾಹಿನಿ ಸುದ್ದಿ, ಕಾನ್ಪುರ: ರೈಲಿಗೆ ಸಿಲುಕಿ ತರಕಾರಿ ವ್ಯಾಪಾರಿಯೊಬ್ಬರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದ ರೈಲ್ವೆ ನಿಲ್ದಾಣದಲ್ಲಿ ಈ ದಾರುಣ ಘಟನೆ ನಡೆದಿದೆ.
ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು ತರಕಾರಿ ವ್ಯಾಪಾರಿ ತಂದಿದ್ದ ತರಕಾರಿ, ತೂಕ ಮತ್ತಿತರ ಪರಿಕರಗಳನ್ನೆಲ್ಲ ರೈಲ್ವೆ ಹಳಿಗಳ ಮೇಲೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ತನ್ನ ಪರಿಕರಗಳು ಹಾಗೂ ಎಸೆಯಲ್ಪಟ್ಟ ತರಕಾರಿಗಳನ್ನು ಹೆಕ್ಕಿಕೊಳ್ಳಲು ಹಳಿ ಮೇಲೆ ಹೋದಾಗ ಏಕಾಏಕಿ ಬಂದ ರೈಲು ಹಾಯ್ದ ವೇಳೆ ಅವರ ಎರಡೂ ಕಾಲುಗಳು ರೈಲಿನ ಚಕ್ರಗಳಡಿ ಸಿಲುಕಿ ತುಂಡಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ರೈಲ್ವೆ ನಿಲ್ದಾಣದ ಬಳಿ ತರಕಾರಿ ಮಾರಾಟ ಮಾಡಲು ಪೊಲೀಸರು ಪ್ರತಿ ಮಾರಾಟಗಾರರಿಂದ ದಿನಕ್ಕೆ 50 ಪಡೆಯುತ್ತಿದ್ದಾರೆ. ಹಣ ಕೊಡದವರಿಗೆ ದೌರ್ಜನ್ಯವೆಸಗಿ ಓಡಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗ ಕಾಲು ಕಳೆದುಕೊಂಡ ತರಕಾರಿ ವ್ಯಾಪಾರಸ್ಥನಿಗೆ ಈ ಸ್ಥಿತಿಗೆ ತಳ್ಳಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಹಲವರು ಒತ್ತಾಯಿಸಿದ್ದಲ್ಲದೆ ಆತನಿಗೆ ಸೂಕ್ತ ಪರಿಹಾರವನ್ನು ಯುಪಿ ಸರಕಾರ ನೀಡುವಂತೆ ಆಗ್ರಹಿಸಿದ್ದಾರೆ.
2022 ರ FIFA ವಿಶ್ವಕಪ್ 16 ರ ಸುತ್ತಿನಲ್ಲಿ ಯಾರು ಯಾರನ್ನು ಎದುರಿಸಲಿದ್ದಾರೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ