LatestNational

ಪ್ರಿಯಕರನೊಂದಿಗೆ ಕಿತ್ತಾಟ; ವಿದ್ಯುತ್ ಟಾವರ್ ಏರಿದ ಮಹಿಳೆ

ಪ್ರಗತಿವಾಹಿನಿ ಸುದ್ದಿ, ರಾಯಪುರ: ತನ್ನ ಪ್ರಿಯಕರನೊಂದಿಗೆ ಕಿತ್ತಾಟ ನಡೆಸಿ ಕೋಪಗೊಂಡ ಮಹಿಳೆಯೊಬ್ಬಳು 150 ಅಡಿ ಎತ್ತರದ ಹೈವೋಲ್ಟೇಜ್ ವಿದ್ಯುತ್ ಟವರ್ ಏರಿ ಆತಂಕ ಹುಟ್ಟಿಸಿದ ಘಟನೆ ನಡೆದಿದೆ.

ಘಟನೆಯ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನಿತಾ ಭೈನಾ ಎಂಬಾಕೆ ಕೊಡ್ಗರ್ ಗ್ರಾಮದ ಮುಕೇಶ್ ಎಂಬಾತನೊಂದಿಗೆ ಒಂದು ವರ್ಷದಿಂದ ವಿವಾಹೇತರ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಪ್ರಿಯಕರನ ಗ್ರಾಮಕ್ಕೆ ತೆರಳಿದ್ದ ಅನಿತಾ ಆತನೊಂದಿಗೆ ವಾಸಿಸತೊಡಗಿದ್ದಳು.

ಏತನ್ಮಧ್ಯೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಜಗಳ ಬೀದಿಗೆ ಬಂತು. ಸಿಟ್ಟಿಗೆದ್ದ ಅನಿತಾ ವಿದ್ಯುತ್ ಟಾವರ್ ಒಂದರ ತುತ್ತ ತುದಿಗೆ ಏರಿ ಉಸಿರುಗಟ್ಟುವ ವಾತಾವರಣ ಸೃಷ್ಟಿಸಿದಳು. ಆಕೆಯ ಪ್ರಿಯಕರ ಕೆಳಗಿಳಿಯುವಂತೆ ಮನವೊಲಿಸಲು ಗೋಳಾಡಿದರೂ ಅನಿತಾ ಮಾತ್ರ ಜಪ್ಪಯ್ಯ ಎನ್ನಲಿಲ್ಲ. ಕೊನೆಗೆ ಆಕೆಯನ್ನು ಕೆಳಗಿಳಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

ಇದೀಗ ಅನಿತಾ- ಮುಕೇಶ್ ರಾಜಿಯಾಗಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button