Latest

ಮತದಾನಕ್ಕೆ ಬಂದು ಮತಗಟ್ಟೆ ಕಟ್ಟಡದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228 ರಲ್ಲಿ ಮತದಾನಕ್ಕೆ ಬಂದಿದ್ದ ತುಂಬು ಗರ್ಭಿಣಿಯೊಬ್ಬರು ಮತಗಟ್ಟೆ ಕಟ್ಟಡದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ಮಣಿಲಾ ಎನ್ನುವ ಮಹಿಳೆ ಮತಗಟ್ಟೆ ಕಟ್ಟಡದಲ್ಲಿ ಮಗು ಹೆತ್ತವರು. ಮತದಾನ ಮಾಡಿದ ಕೆಲ ಕ್ಷಣಗಳಲ್ಲೇ ಹೆರಿಗೆ ನೋವು ಅನುಭವಿಸತೊಡಗಿದ ಅವರನ್ನು ತಕ್ಷಣದಲ್ಲಿ ಕೂಡಲೇ ಪಕ್ಕದ ಕೊಠಡಿಗೆ ಕರೆದೊಯ್ಯಲಾಯಿತು.

Home add -Advt

ಅಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದರು. ನಂತರದಲ್ಲಿ ತಾಯಿ- ಹಾಗೂ ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈ ವೇಳೆ ಮತಗಟ್ಟೆ ಅಧಿಕಾರಿಗಳು ಹಾಗೂ ಆರೋಗ್ಯ ಸೇವೆ ನೀಡಲು ಆಗಮಿಸಿದ್ದ ಸಿಬ್ಬಂದಿ ಅವರಿಗೆ ನೆರವಾದರು.

https://pragati.taskdun.com/vidhanasabha-electionvoting-endmay-13th-result/
https://pragati.taskdun.com/cet-online-mock-test-on-may-11and-13-here-is-the-qr-code-for-registration/
https://pragati.taskdun.com/accused-of-police-baton-to-a-woman-who-came-to-vote-locals-argue-and-push-with-polling-station-officials/

Related Articles

Back to top button