Kannada NewsLatest

ಅಮ್ಮನ ಟ್ರಿಪ್ ಖಯಾಲಿಗೆ ಪ್ರಾಣ ತೆತ್ತ ಕಂದಮ್ಮ

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ತಾಯಿಯೊಬ್ಬಳ ಟ್ರಿಪ್ ಖಯಾಲಿಗೆ ಮಗು ಪ್ರಾಣ ತೆತ್ತಿದೆ.

ಕ್ರಿಸ್ಟಲ್ ಎ. ಕ್ಯಾಂಡೆಲಾರಿ ಎಂಬ ಮಹಿಳೆ ಮಗುವಿನ ಸಾವಿಗೆ ಕಾರಣಳಾದ ತಾಯಿ. ಜೈಲಿನ್ ಎಂಬ ಒಂದುವರೆ ವರ್ಷದ ಮಗಳನ್ನು ಮನೆಯಲ್ಲೇ ಬಿಟ್ಟು 10 ದಿನಗಳ ಟ್ರಿಪ್ ಗೆ ಹೋದ ತಾಯಿ ಮಗುವನ್ನು ನೋಡಿಕೊಳ್ಳಲು ಯಾರಿಗೂ ಹೇಳಿರಲಿಲ್ಲ. ಮನೆಗೆ ಬೀಗ ಜಡಿದಿದ್ದನ್ನು ನೋಡಿ ಮಗುವಿನೊಂದಿಗೆ ತಾಯಿ ಹೋಗಿರಬಹುದೆಂದು ಅಕ್ಕಪಕ್ಕದ ಜನ ಭಾವಿಸಿದ್ದರು.

ಆದರೆ ಇತ್ತ ಮನೆಯಲ್ಲಿ ಒಂಟಿಯಾಗಿದ್ದ ಮಗು 10 ದಿನಗಳ ಕಾಲ ಆಹಾರ, ನೀರು ಏನೂ ಇಲ್ಲದೆ ಮೃತಪಟ್ಟಿದೆ. ೀ ಸಂಬಂಧ ಪೊಲೀಸರು ಕ್ರಿಸ್ಟಲ್ ಳನ್ನು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ.

Home add -Advt

Related Articles

Back to top button