
ಪ್ರಗತಿವಾಹಿನಿ ಸುದ್ದಿ: ಮಹಿಳಾ ಅಭಿಮಾನಿ ತನ್ನ 72 ಕೋಟಿ ರೂ. ಆಸ್ತಿಯನ್ನು ಬಾಲಿವುಡ್ ನಟ ಸಂಜಯ್ ದತ್ ಅವರ ಹೆಸರಿಗೆ ಬರೆದು ಹೋಗಿರುವಂತಹ ವಿಚಾರವನ್ನು ಸಂಜಯ್ ದತ್ ಬಹಿರಂಗಪಡಿಸಿದ್ದಾರೆ.
2018 ರಲ್ಲಿ ತಮ್ಮ ಅಭಿಮಾನಿಯೊಬ್ಬರು ತಮ್ಮ ಹೆಸರಿಗೆ ಬರೋಬ್ಬರಿ 72 ಕೋಟಿ ರೂ. ಆಸ್ತಿಯನ್ನು ಬಿಟ್ಟು ಹೋಗಿದ್ದಾಗಿ ದತ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಬಳಿಕ ಆ ಹಣವನ್ನು ಅವರು ಏನು ಮಾಡಿದರು ಎಂಬುದನ್ನೂ ಅವರು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಸಂಜಯ್ ದತ್ ಕರ್ಲಿ ಟೇಲ್ಸ್ ಜೊತೆಗಿನ ಸಂಭಾಷಣೆಯ ಸಂದರ್ಭ 2018 ರಲ್ಲಿ ತಮ್ಮ ಮಹಿಳಾ ಅಭಿಮಾನಿಯೊಬ್ಬರು ನಿಮ್ಮ ಹೆಸರಿಗೆ ಅಪಾರ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ ಎನ್ನೋ ಗುಸುಗುಸು ಚರ್ಚೆಯಾಗಿತ್ತು. ಇದು ನಿಜವೇ ಎಂದು ದತ್ ಅವರನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಸಂಜಯ್ ಸಕಾರಾತ್ಮಕವಾಗಿಯೇ ಉತ್ತರಿಸಿದ್ದಾರೆ.
ನಟ ಸಂಜಯ್ ದತ್ ಜೈಲಿಗೆ ಹೋಗಿ ಬಂದಿದ್ದರೂ ಅವರ ಫ್ಯಾನ್ ಕ್ರೇಜ್ ಎಂದಿಗೂ ಮಾಸಿಲ್ಲ. ಅದೆಷ್ಟೋ ನಿಷ್ಠಾವಂತ ಫ್ಯಾನ್ಸ್‌ಗಳನ್ನು ಸಂಜಯ್ ಈಗಲೂ ಹೊಂದಿದ್ದಾರೆ.