Politics

*ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ: ಸಿಎಂ ಸಿದ್ದರಾಮಯ್ಯ ಕಂಬನಿ*

ಪ್ರಗತಿವಾಹಿನಿ ಸುದ್ದಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅಪ್ರತಿಮ ಬುದ್ಧಿವಂತಿಕೆಯ ರಾಜನೀತಿಜ್ಞ, ಅವರ ನಾಯಕತ್ವ ಮತ್ತು ದೃಷ್ಟಿಕೋನ ನಮ್ಮ ರಾಷ್ಟ್ರದ ಮೇಲೆ ಅಳಿಸಲಾಗದ ಗುರುತು ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾನು ಮೊದಲ ಬಾರಿಗೆ ಕರ್ನಾಟಕದ ಸಿಎಂ ಆಗಿದೆ. ನಮ್ಮ ಬಜೆಟ್ ಕ್ರಮಗಳಿಗೆ ಅವರ ಪ್ರೋತ್ಸಾಹ ಮತ್ತು ಆಹಾರ ಹಕ್ಕು ಕಾಯಿದೆಯಂತಹ ಹೆಗ್ಗುರುತು ಯುಪಿಎ ನೀತಿಗಳ ಪ್ರಭಾವವು ಕರ್ನಾಟಕದ ಪ್ರಗತಿ ಮತ್ತು ಕಲ್ಯಾಣ ಉಪಕ್ರಮಗಳನ್ನು ರೂಪಿಸಿತು ಎಂದು ಸಿಎಂ ಸ್ಮರಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ದು:ಖ ಭರಿಸುವ ಶಕ್ತಿ ನೀಡಲಿ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಪ್ರಾಥಿಸಿದ್ದಾರೆ. ಅವರ ಪರಂಪರೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button