CrimeKannada NewsNational

*ಬಾಯ್ ಫ್ರೆಂಡ್ ಜೊತೆ ಡಿನ್ನರ್ ಗೆ ಹೋಗಿದ್ದ ಯುವತಿ ಮೇಲೆ 7 ಜನರಿಂದ ಗ್ಯಾಂಗ್ ರೇಪ್*

ಪ್ರಗತಿವಾಹಿನಿ ಸುದ್ದಿ: ತನ್ನ ಬಾಯ್ ಫ್ರೆಂಡ್ ಜೊತೆ ಡಿನ್ನರ್ ಗೆ ಹೋಗಿದ್ದ ಯುವತಿಗೆ ಚಾಕು ತೋರಿಸಿ 7 ಜನರು ಗ್ಯಾಂಗ್ ರೇಪ್ ಮಾಡಿ, ಸಂತ್ರಸ್ಥೆಯ ಖಾತೆಯಿಂದ 10 ಸಾವಿರ ಹಣ ವರ್ಗಾಯಿಸಿ ಅಟ್ಟಹಾಸ ಮೆರೆದಿದ್ದಾರೆ.

ಅಸ್ಸಾಂನ ಸಿಲ್ಚಾರ್ ಪಟ್ಟಣದಲ್ಲಿ ಫೆ. 19 ರಂದು ಈ ಗ್ಯಾಂಗ್ ರೇಪ್ ನಡೆದಿದ್ದು, ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

Home add -Advt

7 ಜನ ಕಾಮುಕರು ಒಬ್ಬೊಬ್ಬರಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ತನ್ನಿಂದ ತಮ್ಮ ಖಾತೆಗೆ 10,000 ರೂ. ಹಣವನ್ನೂ ವರ್ಗಾಯಿಸಿಕೊಂಡು ಎಸ್ಕೇಪ್‌ ಆಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಸಂತ್ರಸ್ತೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನಂತ್ರ ಆಕೆಯ ಹೇಳಿಕೆಯನ್ನೂ ದಾಖಲಿಸಲಾಗಿದೆ. 

ಅತ್ಯಾಚಾರ ಎಸಗಿದ 7 ಜನರ ಪೈಕಿ ಇಬ್ಬರನ್ನು ಸಂತ್ರಸ್ತೆ ಗುರುತಿಸಿದ್ದಾಳೆ. ಆ ಇಬ್ಬರು ಕಾಮುಕರು ಸಿಲ್ಚಾರ್ ಪಟ್ಟಣದ ಆಶ್ರಮ ರಸ್ತೆ ಪ್ರದೇಶದ ನೀಲೋತ್ಪಾಲ್ ದಾಸ್ (25) ಮತ್ತು ಸುಬೋಲ್ ದಾಸ್ (27) ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರೆ.

ಫೆ.19 ರ ದಿನ ಸಂತ್ರಸ್ತೆಯು ಸಿಲ್ಚಾರ್ ಪಟ್ಟಣದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಬೈಪಾಸ್ ರಸ್ತೆಯಲ್ಲಿ ತನ್ನ ಗೆಳೆಯನೊಂದಿಗೆ ಡಿನ್ನರ್‌ಗೆ ತೆರಳಿದ್ದರು. ಇಬ್ಬರು ಕಾರಿನಲ್ಲಿದ್ದಾಗ ಮಹೀಂದ್ರಾ ಥಾರ್‌ನಲ್ಲಿ ಬಂದ ಪುರುಷರ ಗುಂಪೊಂದು ಅವರ ಮೇಲೆ ದಾಳಿ ಮಾಡಿದೆ. ಇದಕ್ಕಿದ್ದಂತೆ ಮಹಿಳೆ ಮತ್ತು ಆಕೆಯ ಗೆಳೆಯನನ್ನ ಎಳೆದಾಡಿದ್ದಾರೆ. ಬಳಿಕ ಒಬ್ಬೊಬ್ಬರಾಗಿ ಗೆಳೆಯನ ಮುಂದೆಯೇ ಆಕೆಯ ಮೇಲೆ ಅತ್ಯಾಚಾರ ಎಗಿಸಿದ್ದಾರೆ ಎಂದು ಸಂತ್ರಸ್ತೆ ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನೂ ಈ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ವಿಪಕ್ಷಗಳು ಆಡಳಿತ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿವೆ.

Related Articles

Back to top button