
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ; ತಾಲೂಕಿನ ಸಂಕೇಶ್ವರ ಪಟ್ಟಣದ ನೇಸರಿ ಗಾರ್ಡನ ಹತ್ತಿರ ಗೋಕಾಕ ದಿಂದ ಸಂಕೇಶ್ವರ ಕಡೆಗೆ ಹೋಗುತ್ತಿದ್ದ ಬೂಲೇರೊ ವಾಹನ ಟೈಯರ್ ಒಡೆದ ಪರಿಣಾಮವಾಗಿ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದು ಓರ್ವ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಸಂಕೇಶ್ವರ ಪಟ್ಟಣದ ನಿವಾಸಿ ಶಿವಾನಂದ ಕಾಳಪ್ಪಾ ಮಾಳೆದಾರ (೨೪) ಮೃತವ್ಯಕ್ತಿ. ದ್ವಿಚಕ್ರವಾಹನದ ಹಿಂದೆ ಕುಳಿತ ಸವಾರ ಶ್ರೀಧರ ಮಿಶ್ರಕೋಟಿ (೨೩) ಇತನಿಗೆ ತೀವ್ರಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಾಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಮೃತಪಟ್ಟ ಶಿವಾನಂದ ಕಾಳಪ್ಪಾ ಮಾಳೆದಾರ ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಮಳಿಗೆಯಲ್ಲಿ ಮೊಬೈಲ್ ಅಂಗಡಿ ವ್ಯಾರಸ್ಥನಾಗಿದ್ದು ಅಂಗಡಿ ಬಂದ್ ಮಾಡಿಕೊಂಡು ಮನೆಗೆ ಮರಳುವ ಸಮಯದಲ್ಲಿ ಈ ಘಟನೆ ಜರುಗಿದೆ, ಸಂಕೇಶ್ವರ ಪಿಎಸ್‌ಐ ಗಣಪತಿ ಕೂಗನೊಳ್ಳಿ ಪ್ರಕರಣ ದಾಖಲಾಸಿಕೊಂಡು ತನಿಖೆ ನಡೆಸಿದ್ದಾರೆ.
ರಸ್ತೆ ಬದಿ ನಿಂತವನಿಗೆ ವಾಹನ ಬಡಿದು ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ