ಪ್ರಗತಿವಾಹಿನಿ ಸುದ್ದಿ, ಮುಂಬೈ: ಹುಡುಗಿಯ ದುಪಟ್ಟಾ ಎಳೆದ 20 ವರ್ಷದ ಯುವಕನಿಗೆ ಮುಂಬೈ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಯುವಕ ಲೈಂಗಿಕ ಉದ್ದೇಶದಿಂದ 15 ವರ್ಷದ ಬಾಲಕಿ ಅಂಗಡಿಗೆ ಹೋಗುತ್ತಿದ್ದ ವೇಳೆ ಆಕೆಯ ದುಪಟ್ಟಾ ಹಿಡಿದು ಕೈ ಎಳೆದಿದ್ದ. ಬಾಲಕಿ ಈ ವಿಷಯವನ್ನು ಮನೆಯಲ್ಲಿ ತಿಳಿಸುತ್ತಿದ್ದಂತೆ ಆಕೆಯ ತಂದೆ ಮಾಹಿಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಯುವಕನನ್ನು ಪೊಲೀಸರು ಬಂಧಿಸಿದಾಗ ತಾವಿಬ್ಬರೂ ಪ್ರೀತಿಸುತ್ತಿರುವುದಾಗಿ ಹೇಳಿ ದಿಕ್ಕು ತಪ್ಪಿಸಲು ಯತ್ನಿಸಿದ್ದ.
ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರಿಯಾ ಬಾನಕರ ಘಟನೆಯು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತದೆ, ಸಂತ್ರಸ್ತೆ ಮತ್ತು ಅವಳ ಕುಟುಂಬದ ಮೇಲೆ ದೀರ್ಘಕಾಲದವರೆಗೆ ಪರಿಣಾಮ ಉಂಟುಮಾಡುತ್ತದೆ. ಎಂದು ಪರಿಗಣಿಸಿ ಆರೋಪಿ ಯುವಕನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.
ನವೆಂಬರ್ ನಲ್ಲಿ ಬೆಳಗಾವಿಗೆ ಅರವಿಂದ ಕೇಜ್ರೀವಾಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ