ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಧರ್ಮಯುದ್ಧ ಆರಂಭವಾಗಿದೆ. ಹಿಜಾಬ್ V/S ಕೇಸರಿ ಶಾಲು, ಹಾಲಾಲ್ V/S ಜಟ್ಕಾ ಕಟ್, ಬಳಿಕ ಇದೀಗ ಆಜಾನ್ V/S ಭಜನೆ ವಿವಾದ ಆರಂಭವಾಗಿದೆ. ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯುವಂತೆ ಹಿಂದೂಪರ ಸಂಘಟನೆ, ಶ್ರೀರಾಮ ಸೇನೆ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆಸುವಂತೆ ಮಹಾ ಸರ್ಕಾರಕ್ಕೆ ರಾಜ್ ಠಾಕ್ರೆ ಎರಡು ದಿನಗಳ ಹಿಂದೆ ಆಗ್ರಹಿಸಿದ್ದರು. ಒಂದು ವೇಳೆ ಮಸೀದಿ ಧ್ವನಿವರ್ಧಕ ತೆಗೆಸದಿದ್ದರೆ ಹನುಮಾನ್ ಚಾಲೀಸ ಶ್ಲೋಕ ಹಾಕುವುದಾಗಿ ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿಯೂ ಮಸೀದಿಗಳಲ್ಲಿ ಧ್ವನಿವರ್ಧಕ ಬ್ಯಾನ್ ಕೂಗು ಕೇಳಿಬರುತ್ತಿದೆ.
ಮಸೀದಿಗಳಲ್ಲಿ ಅಲ್ಲಾಹು ಅಕ್ಬರ್ ಎಂದು ಧ್ವನಿವರ್ಧಕದ ಮೂಲಕ ಆಜಾನ್ ಕೂಗಿದರೆ ಅದಕ್ಕೆ ಪ್ರತಿಯಾಗಿ ಮಂದಿರಗಳಲ್ಲಿ ಓಂ ನಮ: ಶಿವಾಯ, ಜೈ ಶ್ರೀರಾಮ್ ಎಂದು ಮೈಕ್ ನಲ್ಲಿ ಪಠಿಸುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡುವೆ. ಅಲ್ಲದೇ ಯಲಹಂಕದ ಆಂಜನೇಯ ದೇವಾಲಯದಿಂದ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸಿದೆ.
ಇನ್ನು ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಸುವಂತೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಕೂಡ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದು, ಮಸೀದಿಗಳ ಆಜಾನ್ ನಿಂದಾಗಿ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ರೋಗಿಗಳಿಗೆ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ. ಅಲ್ಲದೇ ಶಬ್ಧಮಾಲಿನ್ಯ ಕೂಡ ಹೆಚ್ಚುತ್ತದೆ. ಅಷ್ಟು ಜೋರಾಗಿ ಧ್ವನಿವರ್ಧಕದ ಮೂಲಕ ಪ್ರಾರ್ಥನೆ ಮಾಡುವ ಅಗತ್ಯವೇನಿದೆ? ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೈಕ್ ಅಪಘಾತ; SSLC ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ