Latest

ಆಪ್ ಸಚಿವರ ಮನೆಯಲ್ಲಿ ಬರೋಬ್ಬರಿ 2.23 ಕೋಟಿ ಹಣ, 133 ಚಿನ್ನದ ನಾಣ್ಯಗಳು ಪತ್ತೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ವೇಳೆ ಅಪಾರ ಪ್ರಮಾಣದ ಹಣ ಹಾಗೂ ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಸಚಿವರಿಗೆ ಸಂಬಂಧಿಸಿದ ನಿವಾಸ ಸೇರಿದಂತೆ 7 ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಈ ವೇಳೆ 2.23 ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.

ಸಚಿವರ ನಿವಾಸದಲ್ಲಿ 2.23 ಕೋಟಿ ಹಣ, 133 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಇನ್ನು ಸಚಿವರ ಆಪ್ತ ವೈಭವ್ ಜೈನ್ ನಿವಾಸದಲ್ಲಿ 41.5 ಲಕ್ಷ ನಗದು, ಜಿ.ಎಸ್.ಮತ್ತಾರು ನಿವಾಸದಲ್ಲಿ 20 ಲಕ್ಷ ನಗದು ಹಣ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಜನರ ಭಾವನೆಗಳ ಜತೆ ಚಲ್ಲಾಟವಾಡುವುದೇ ಬಿಜೆಪಿ ರೂಢಿಯಾಗಿದೆ; ಲಕ್ಷ್ಮಿ ಹೆಬ್ಬಾಳ್ಕರ್

Home add -Advt

Related Articles

Back to top button