Karnataka NewsLatest

ಶಾಸಕ ಅಭಯ್ ಪಾಟೀಲ್ ಗೆ ಮಹತ್ವದ ಹುದ್ದೆ

17 ಜನರ ಸಮಿತಿಯಲ್ಲಿ ಬೆಳಗಾವಿಯ ಐವರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ಕರ್ನಾಟಕ ವಿಧಾನಸಭೆಯ ಎಸ್ಟಿಮೇಟ್ ಕಮಿಟಿ (ಅಂದಾಜುಗಳ ಸಮಿತಿ) ಅಧ್ಯಕ್ಷರನ್ನಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರನ್ನು ನೇಮಕಮಾಡಲಾಗಿದೆ.

ಒಟ್ಟೂ 17 ಜನರ ಸಮಿತಿಯನ್ನು ನೇಮಕ ಮಾಡಿ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ.

ಎಸ್.ಎ.ರವೀಂದ್ರನಾಥ, ದುರ್ಯೋಧನ ಐಹೊಳೆ, ವೀರಣ್ಣ ಚರಂತಿಮಠ, ಶಿವರಾಜ ಪಾಟೀಲ, ಹಾಲಪ್ಪ ಆಚಾರ, ಅಮೃತ ದೇಸಾಯಿ, ಮಹಾಂತೇಶ ದೊಡ್ಡಗೌಡರ್, ಸುನೀಲ ನಾಯ್ಕ, ಅಮರೇಗೌಡ ಬಯ್ಯಾಪುರ, ಶರಣ ಬಸಪ್ಪ ದರ್ಶನಾಪುರ, ಮಹಾಂತೇಶ ಕೌಜಲಗಿ, ಸತೀಶ್ ಜಾರಕಿಹೊಳಿ, ಯಶವಂತರಾಯಗೌಡ ಪಾಟೀಲ, ಡಿ.ಸಿ.ತಮ್ಮಣ್ಣ, ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ ಸಮಿತಿಯ ಸದಸ್ಯರಾಗಿದ್ದು, ಅಭಯ ಪಾಟೀಲ ಅಧ್ಯಕ್ಷರಾಗಿರುತ್ತಾರೆ.

ಈ ಹಿಂದೆ ಎಸ್ಟಿಮೇಟ್ ಸಮಿತಿ ಸದಸ್ಯರಾಗಿ ಬೆಳಗಾವಿ ಜಿಲ್ಲೆಯ ಹಲವಾರು ಅಕ್ರಮಗಳನ್ನು ಅಭಯ ಪಾಟೀಲ ಬಯಲಿಗೆಳೆದಿದ್ದರು. ಅನೇಕ ಎಂಜಿನಿಯರ್ ಗಳು ಅಮಾನತುಗೊಂಡಿದ್ದರು.

Home add -Advt

Related Articles

Back to top button