ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ವರ್ಧಮಾನ ಸಾಗರ ಮಹಾರಾಜರು ಶಾಂತಿ ಸಾಗರ ಮಹಾರಾಜರ ದೀಕ್ಷಾ ಭೂಮಿಯಾದ ಯರನಾಳದಲ್ಲಿ ಚಾರ್ತುಮಾಸ ಹಾಗೂ ಪಿಂಚಿ ಪರಿರ್ತನಾ ಜತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಜಿಲ್ಲೆ ಪಾವನವಾಗಿದೆ. ಶ್ರಾವಕ, ಶ್ರಾವಕಿಯರು, ಶ್ರೀಗಳ ಆರ್ಶೀವಾದ ಪಡೆಯುತ್ತಿರುವ ನಾವೆಲ್ಲರೂ ಭಾಗ್ಯವಂತರು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ಅವರು ರವಿವಾರದಂದು ತಾಲೂಕಿನ ಯರನಾಳ ಗ್ರಾಮದಲ್ಲಿ ಜರುಗುತ್ತಿರುವ ಅಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ದೀಕ್ಷಾ ಶತಾಬ್ದಿಯ ವಸಂತ ನಿಲಜಗಿ ಸಭಾ ಮಂಟಪದಲ್ಲಿ ಪಿಂಚಿ ಪರಿವರ್ತನ ಮತ್ತು ಕಳಶ ನಿಷ್ಠಾಪಣೆ ಸಮಾರಂಭದಲ್ಲಿ ಮಾತನಾಡಿದರು.
ಬಾಲ್ಯದಲ್ಲಿ ಮಕ್ಕಳಿಗೆ ಧರ್ಮ ಸಂಸ್ಕಾರ ಸಿಗಬೇಕಾದರೆ ಪಾಠಶಾಲೆ ಅವಶ್ಯಕತೆ ಇದ್ದು ಅದರ ಬಗ್ಗೆ ಶ್ರಾವಕ ಶ್ರಾವಕಿಯರು ಪಾಠಶಾಲೆ ಪ್ರಾರಂಭಿಸಲು ಗಮನ ಹರಿಸಬೇಕೆಂದು ಹೇಳಿದರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಸಂಘಟಕರು ಮಹಾರಾಜರ ದೀಕ್ಷಾ ಭೂಮಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ನಮಗೆಲ್ಲ ಸಂತಸ ನೀಡಿದೆ. ಶ್ರೀಗಳ ನುಡಿಯಂತೆ ಶಾಂತಿ ಸಾಗರ ಮಹಾರಾಜರ ದೀಕ್ಷಾ ಭೂಮಿಯಲ್ಲಿ ಚಾರ್ತುಮಾಸ ನೆರವೇರಿಸಿದ ಪಿಂಚಿ ಪರಿರ್ವತನಾ ಸಮಾರಂಭದಲ್ಲಿ ಇಂದು ಉತ್ತರ ಭಾರತದ ಶ್ರಾವಕ ಶ್ರಾವಕಿಯರು ಪಾಲ್ಗೊಂಡು ಶ್ರೀಗಳ ಆರ್ಶೀವಾದ ಪಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಆಚಾರ್ಯಶ್ರೀ ವರ್ಧಮಾನ ಸಾಗರ ಮಹಾರಾಜರು ಆರ್ಶೀವಚನ ನೀಡಿ ಮುನಿಗಳಿಗೆ ಹಾಗೂ ಮಾತಾಜಿಗಳಿಗೆ ಪಿಂಚಿ ಧಾರಣೆ ಮಾಡಿದರು.
ಸಂಚಾಲಕರಾದ ಮಹಾವೀರ ನಿಲಜಗಿ, ಬಾಹುಬಲಿ ನಾಗನೂರೆ, ನೇಮಿನಾಥ ಖೇಮಾಲಾಪೂರೆ ಸೇರಿದಂತೆ ಹಲವಾರು ಗಣ್ಯರನ್ನು ಸತ್ಕರಿಸಿದರು.
ಹುಕ್ಕೇರಿ ಜೈನ ಮಹಿಳಾ ಮಂಡಳ ಸೇರಿದಂತೆ ಹಲವಾರು ಗ್ರಾಮಗಳ ಶ್ರಾವಕಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮಕ್ಕೆ ಶ್ರಾವಕ ಶ್ರಾವಕಿಯರು ಆಗಮಿಸುವುದಕ್ಕಾಗಿ ಹುಕ್ಕೇರಿ, ಬೆಳಗಾವಿ ಭಾಗದ ಹಲವಾರು ಗ್ರಾಮಗಳಿಂದ ಹುಕ್ಕೇರಿಯ ಮಹಾವೀರ ಶಿಕ್ಷಣ ಸಂಸ್ಥೆ ಹಾಗೂ ಬೆಳಗಾವಿ ಭರತೇಶ ಶಿಕ್ಷಣ ಸಂಸ್ಥೆಯವರು ಉಚಿತ ಬಸ್ ಸೌಕರ್ಯ ಕಲ್ಪಿಸಿದ್ದರು.
ದಕ್ಷಿಣ ಭಾರತದ ಜೈನ ಮಹಾಸಭಾ ಅಧ್ಯಕ್ಷ ರಾವಸಾಹೇಬ ಪಾಟೀಲ, ಮಾಜಿ ಶಾಸಕ ಕಲ್ಲಪ್ಪಾ ಮಗೆನ್ನವರ ಸಂಘಟಕರಾದ ವಿನೋದ ದೊಡ್ಡನ್ನವರ, ಅನೀಲ ಶೆಠಿ, ರಾಕೇಶ ಶೇಠಿ, ಅಶೋಕ ಶೇಠಿ, ಪುಷ್ಪಕ ಹನುಮನ್ನವರ, ರಾಜು ಜಕ್ಕನ್ನವರ, ಸಂಜು ನಿಲಜಗಿ ಮತ್ತಿತರರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ