Karnataka NewsLatestUncategorized

*ಈ ಸರ್ಕಾರ ಹೆಚ್ಚು ದಿನ ಇರಲ್ಲ ಎಂದ ಬಿಜೆಪಿ ಶಾಸಕ ಅಭಯ್ ಪಾಟೀಲ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾಗಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅಭಯ್ ಪಾಟೀಲ್, ಈ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅಭಯ್ ಪಾಟೀಲ್, ಕಾಂಗ್ರೆಸ್ ಗೆ ಬಹುಮತ ಸಿಕ್ಕಿದೆ. ಸಂಪೂರ್ಣ ಬಹುಮತ ಇದ್ದಾಗ ಸಿಎಂ ಘೋಷಣೆಗೆ ಒಂದು ಗಂಟೆ ಸಾಕು, ಆದರೆ ಇವರು ನಾಲ್ಕು ದಿನ ಪ್ಯಾಚ್ ಅಪ್ ಮಾಡಿದ್ದಾರೆ ಎಂದರೆ ತಿಳಿದುಕೊಳ್ಳಿ ಎಂದಿದ್ದಾರೆ.

ಸಿಎಂ ಆಯ್ಕೆಗೆ ನಾಲ್ಕು ದಿನ ತೆಗೆದುಕೊಂಡಿದ್ದರಿಂದ ಸರ್ಕಾರದ ಬಗ್ಗೆ ಈಗಲೇ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಬಣ, ಡಿಕೆಶಿ ಬಣ ಚುನಾವಣೆ ಮೊದಲಿನಿಂದಲೂ ಇತ್ತು. ಚುನಾವಣೆ ಮುಗಿದ ಮೇಲೆ ಪ್ರಬಲವಾಗಿದೆ ಎಂದು ಟೀಕಿಸಿದರು.

Home add -Advt
https://pragati.taskdun.com/siddaramaiahcmfirst-tweet/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button